ಬೆಂಗಳೂರು: ರಾಜ್ಯ ಸಚಿವ ಸಂಪುಟ ರಚನೆಯ ಕಸರತ್ತು ಆರಂಭವಾಗುತ್ತಿದ್ದಂತೆ ಉಪ ಮುಖ್ಯಮಂತ್ರಿ ಪಟ್ಟಕ್ಕಾಗಿ ಆರ್.ಅಶೋಕ್ ಬಿಗಿ ಪಟ್ಟು ಹಿಡಿದಿದ್ದಾರೆ.
ದೆಹಲಿಯಲ್ಲಿ ಮೊನ್ನೆಯಿಂದಲೂ ಬೀಡುಬಿಟ್ಟಿರುವ ಆರ್.ಅಶೋಕ್ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಡಿಸಿಎಂ ಪಟ್ಟಕ್ಕಾಗಿ ಲಾಬಿ ನಡೆಸಿದ್ದಾರೆ. ಇಂದು ಸಿಎಂ ಬೊಮ್ಮಾಯಿ ಕೂಡ ದೆಹಲಿಗೆ ತೆರಳಿದ್ದು, ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕಲು ಅದೂ ಕೂಡ ಸಹಕಾರಿಯಾಗಲಿದೆ. ಜೊತೆಗೆ ಹಿಂದಿನ ಅನುಭವ ಹಾಗೂ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಎನ್ನುವ ಅಸ್ತ್ರಗಳನ್ನು ಮುಂದಿಟ್ಟು ಡಿಸಿಎಂ ಹುದ್ದೆ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
PublicNext
30/07/2021 10:01 am