ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡತಗಳ ಬಗ್ಗೆ ಮಾಹಿತಿ ಕೇಳಿದ್ರಂತೆ ಬೆಲ್ಲದ್: ಕುತೂಹಲಕಾರಿ ಸಂಗತಿ ಬೆಳಕಿಗೆ

ಬೆಂಗಳೂರು:ಮುಖ್ಯಮಂತ್ರಿ ಸ್ಥಾನದ ಸಂಭವನೀಯರ ಪಟ್ಟಿಯಲ್ಲಿ ಬೆಲ್ಲದ ಅವರ ಹೆಸರು ಮುಂಚೂಣಿಯಲ್ಲಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಜೋರಾಗಿ ಕೇಳಿ ಬರುತ್ತಿದ್ದಂತೆ ಕ್ರಿಯಾಶೀಲರಾದ ಅವರು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಬಿ ಎಸ್ ಯಡಿಯೂರಪ್ಪ ಸರ್ಕಾರದಲ್ಲಿನ ಹಲವು ಕಡತಗಳ ವಿಲೇವಾರಿ ಮತ್ತಿತರ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಕೇಳಿದ್ದರು. ಇಂತಹ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಇದೆಲ್ಲದರ ಪರಿಣಾಮ ಒಂದು ಹಂತದಲ್ಲಿ ಹಿರಿಯ ಅಧಿಕಾರಿಗಳಿಗೂ ಬೆಲ್ಲದ ಅವರೇ ಮುಂದಿನ ಸಿಎಂ ಎಂಬ ತೀರ್ಮಾನಕ್ಕೆ ಬಂದಿದ್ದರು.

ಅಂತಿಮವಾಗಿ ಮಂಗಳವಾರ ಸಂಜೆ ಬಸವರಾಜ ಬೊಮ್ಮಾಯಿ ಅವರ ಹೆಸರು ಹೊರಬಿದ್ದ ಬಳಿಕವೇ ಅಧಿಕಾರಿಗಳಿಗೆ ಬೆಲ್ಲದ ಅವರ ನಡೆ ಬಗ್ಗೆ ಅಚ್ಚರಿ ಮೂಡಿದೆ. ಒಟ್ಟಿನಲ್ಲಿ ಬೆಲ್ಲದ ಅವರು ಸಿಎಂ ಸ್ಥಾನಕ್ಕೆ ಗಾಳ ಇದೀಗ ಸಚಿವ ಸ್ಥಾನಕ್ಕೆ ಬಂದು ಬೀಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಹಾಗೂ ಹಾಗು ಧಾರವಾಡ ಪ್ರತಿನಿಧಿಸುತ್ತಿದ್ದ ಮಾಜಿ ಸಿಎಂ ಶೆಟ್ಟರ್ ಅವರು ಸಚಿವರಾಗುವುದಿಲ್ಲ ಎಂದು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

29/07/2021 06:48 pm

Cinque Terre

51.52 K

Cinque Terre

6