ಹುಬ್ಬಳ್ಳಿ: ನಾನು ಹಿರಿಯ ರಾಜಕಾರಣಿಯಾಗಿರುವ ಹಿನ್ನಲೆಯಲ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ಆಗಿರುವುದಕ್ಕೆ ನೂತನ ಸಿಎಂ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸ್ಥಾನ ಮಾನ ಬೇಡ ಎಂದು ನಿರ್ಧಾರ ಕೈಗೊಂಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಈ ಕುರಿತು ಪಬ್ಲಿಕ್ ಜೊತೆಗೆ ದೂರವಾಣಿ ಸಂದರ್ಶನದ ಮೂಲಕ ಮಾತನಾಡಿದ ಅವರು, ನಾನು ಸಿನಿಯಾರಿಟಿಯಿಂದ ಮಾತ್ರ ಹೊರಗುಳಿಯಲು ನಿರ್ಧಾರ ಕೈಗೊಂಡಿದ್ದೇನೆ ಇದಕ್ಕೆ ಬೇರೆ ಅರ್ಥಕೊಡುವುದು ಬೇಡ ಎಂದರು.
ಕೈ ಬಿಡುವ ಹಿರಿಯರ ಪಟ್ಟಿಯಲ್ಲಿ ತಾವೂ ಇರಬಹುದೆಂಬ ಅನುಮಾನದಿಂದ ಸಂಪುಟದಿಂದ ಹೊರಗುಳಿಯಲು ನಿರ್ಧರಿಸಿದ್ದೀರಾ? ಎಂಬುವಂತ ಪಬ್ಲಿಕ್ ನೆಕ್ಸ್ಟ್ ಪ್ರಶ್ನೆಗೆ ಉತ್ತರಿಸಿದ ಅವರು,ನಾನು ನಿನ್ನೆಯೇ ನಿರ್ಧಾರ ಮಾಡಿದ್ದೇನೆ. ಆ ಪ್ರಕಾರ ನಾನು ಇಂದು ನನ್ನ ಹೇಳಿಕೆ ನೀಡಿದ್ದೇನೆ ಎಂದು ಅವರು ಹೇಳಿದರು.
ಸಿಎಂ ಸ್ಥಾನದಿಂದ ವಂಚಿತರಾಗಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೀರಾ ಎಂಬುವಂತ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಅದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಬಿ.ಎಸ್.ವೈ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಅವರ ಅಡಿಯಲ್ಲಿ ಕೆಲಸ ಮಾಡಿದ್ದೇವೆ. ನಾನು ಹಿರಿಯನಾಗಿರುವುದರಿಂದ ಸಣ್ಣವರ ಕೈ ಕೆಳಗೆ ಕೆಲಸ ಮಾಡಲು ಆಗಲ್ಲ ಈ ನೈತಿಕತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇನೆ ಎಂದರು.
ಅರವಿಂದ ಬೆಲ್ಲದ್ ಅವರಿಗಾಗಿ ಈ ನಿರ್ಧಾರ ಕೈಗೊಂಡಿದ್ದೀರಾ? ಎಂಬುವಂತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅದ್ಯಾವುದು ಅಲ್ಲ ನಾನು ಸಿನಿಯರ್ ಎನ್ನುವ ಒಂದೇ ಕಾರಣಕ್ಕೆ ಸಚಿವ ಸಂಪುಟದಿಂದ ಹೊರಗೆ ಉಳಿಯಲು ನಿರ್ಧಾರ ಕೈಗೊಂಡಿದ್ದೇನೆ. ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದರು.
PublicNext
28/07/2021 08:09 pm