ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಡಿಯೂರಪ್ಪ ಅತ್ತಿದ್ಯಾಕೆ ಎಂದು ರಾಜ್ಯದ ಜನತೆಗೆ ಗೊತ್ತಾಗಬೇಕು: ಡಿಕೆಶಿ

ಮಂಡ್ಯ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಾಧನಾ ಸಮಾವೇಶದಲ್ಲಿ ರಾಜೀನಾಮೆ ಘೋಷಣೆ ಮಾಡುತ್ತಾ ಕಣ್ಣೀರು ಹಾಕಿದ ನೈಜ ಕಾರಣವೇನೆಂದು ರಾಜ್ಯದ ಜನತೆಗೆ ಬಹಿರಂಗವಾಗಿ ತಿಳಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಹನುಮಂತ ನಗರದಲ್ಲಿ ಜಿ. ಮಾದೇಗೌಡರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಇಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಗೂ ನನ್ನ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಂತ್ರಿ ಮಂಡಲ ಮಾಡೋಕೆ ಮತ್ತು ಆಡಳಿತ ನಡೆಸುವುದಕ್ಕೆ ಸ್ವತಂತ್ರವಾಗಿ ಬಿಡಲಿಲ್ಲ ಅನ್ನೋ ನೋವನ್ನು ಯಡಿಯೂರಪ್ಪರ ವಿದಾಯದ ಭಾಷಣದಲ್ಲಿ ಕಣ್ಣಿರಾಕುತ್ತ ಹೇಳಿಕೆ ನೀಡಿದ್ದು, ಬಹಳ ಸಂಶಯಕ್ಕೆ ಕಾರಣವಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

28/07/2021 03:39 pm

Cinque Terre

36.16 K

Cinque Terre

8

ಸಂಬಂಧಿತ ಸುದ್ದಿ