ಚಿತ್ರದುರ್ಗ : ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಇವರು ಸಿಎಂ ಆಗಲು ಸ್ವಾಮೀಜಿಗಳ ಪ್ರಭಾವ ಕೂಡ ಇರಬಹುದು ಎಂದು ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಮುರುಘಾಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು ರಾಜಕಾರಣ ರಾಜರಾಣಿಗಳ ನಿದ್ದೆ ಕೆಡಿಸುತ್ತದೆ. ಇದಕ್ಕೆಲ್ಲ ಕಾರಣ ರಾಜಕೀಯ ಅಸ್ಥಿರತೆ ಆಗಿದೆ, ಇದಕ್ಕಾಗಿ ಆಡಳಿತ ಸ್ಥಿರತೆ ಬೇಕು ಇದು ಇಂದು ಆಗಿದೆ ಎಂದು ಶ್ರೀಗಳು ತಿಳಿಸಿದರು. ರಾಜಕೀಯ ಅಸ್ಥಿರತೆ ಕೊನೆಗೊಂಡು, ಸ್ಥಿರತೆ ಆಗಬೇಕು ಎಂದು ನಾವು ಹೇಳಿದ್ದೆವು ಎಂದರು.
ಇದಕ್ಕೆ ಪೂರಕವಾಗಿ ಕೆಲಸ ಆಗಿದ್ದು ಇಂದು ಸಿಎಂ ಆಗಿ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿದ್ದಾರೆ. ಇದರಿಂದ ರಾಜಕೀಯ ಅಸ್ಥಿರತೆ ಕೊನೆಗೊಂಡಿದೆ ಎಂದು ಮುರುಘಾ ಶರಣರು ಹೇಳಿದರು. ಬೊಮ್ಮಾಯಿ ಅವರು ಸರ್ವ ಜನರನ್ನು ಕೂಡ ಜೊತೆಗೆ ಕರೆದುಕೊಂಡು ಹೋಗುವ ಮಾತು ಹೇಳಿದ್ದಾರೆ ಎಂದು ತಿಳಿಸಿದ್ದು, ಸಿಎಂ ಬೊಮ್ಮಾಯಿ ಅವರು ಹೋರಾಟದ ಮೂಲಕ ಅಧಿಕಾರಕ್ಕೆ ಬಂದವರು. ಸರ್ವ ಜನರ ಕೆಲಸವನ್ನು ಮಾಡುತ್ತಾರೆ. ಇಂತವರಿಗೆ ನಾವು ಶುಭಾಶಯಗಳನ್ನು ಕೋರುತ್ತೇವೆ ಎಂದು ಶ್ರೀಗಳು ನೂತನ ಮುಖ್ಯಮಂತ್ರಿಗೆ ಶುಭಾಶಯ ಕೋರಿದರು. ಮುಂದಿನ ದಿನಗಳಲ್ಲಿ ಬೊಮ್ಮಾಯಿ ಅವರ ಅಸ್ಥಿರತೆಯನ್ನು ಇಲ್ಲದಂತೆ ಮಾಡುತ್ತಾರೆ. ಬೊಮ್ಮಾಯಿ ಅವರು ಬಿಎಸ್ ವೈ ಗರಡಿಯಲ್ಲಿ ಕೆಲಸ ಮಾಡಿದ್ದವರು .
ಬದಲಾವಣೆ ಬಗ್ಗೆ ಮುಖ್ಯ ಮಂತ್ರಿ ಸ್ಥಾನ ಮಠದ್ದಲ್ಲ, ಇದು ಜನರು ನೀಡುವ ಸ್ಥಾನ ಇದರ ಬಗ್ಗೆ ಯಾವುದೇ ಹಿತಾಸಕ್ತಿ ಇಲ್ಲ, ಬಿಎಸ್ ವೈ ಬದಲಾವಣೆ ಬೇಡ ಎಂದು ಹೇಳಿದ್ದು ನಾವು ಅವರಿಗೆ ಸಾಂತ್ವಾನ ಹೇಳಿದ್ದೆವೆ ಎಂದು ತಿಳಿಸಿದರು.ಈಗ ಒಮ್ಮತಾಭಿಪ್ರಾಯಕ್ಕೆ ಬಂದು ಆಯ್ಕೆ ಮಾಡಿದ್ದಾರೆ. ಯಡಿಯೂರಪ್ಪ ಅವರು ಅಭಿವೃದ್ದಿ ಪರವಾದ ಕೆಲಸ ಮಾಡಿದ್ದು, ಪ್ರಧಾನಿ ಮೋದಿಯವರು ಯಡಿಯೂರಪ್ಪ ಅವರ ಕೆಲಸಗಳನ್ನು ಹೊಗಳಿ, ನೂತನ ಸಿಎಂ ಗೆ ಶುಭಾಶಯಗಳ ಕೋರಿದ್ದಾರೆ.
ಬೊಮ್ಮಾಯಿ ಸಿಎಂ ಆಗಲು ಸ್ವಾಮೀಜಿಗಳ ಪ್ರಭಾವವೂ ಕೂಡ ಇರಬಹುದು, ಯಾವುದೇ ಸಮಸ್ಯೆಗಳಿಲ್ಲದೆ ಸರಿಯಾದ ಆಡಳಿತ ನಡೆಸಿಕೊಂಡು ಹೋಗುತ್ತಾರೆ ಎಂಬ ಭರವಸೆ ಇದೆ ಎಂದು ಶ್ರೀಗಳು ಹೇಳಿದರು. ಇನ್ನು ಚಿತ್ರದುರ್ಗ ಜಿಲ್ಲೆಗೆ ಬಹುಮುಖ್ಯವಾದ ಭದ್ರಾ ಮೇಲ್ದಂಡೆ ಯೋಜನೆ ಸ್ಪೀಡ್ ಅಪ್ ಮಾಡಲು ನಾನು ಸಿಎಂ ಜೊತೆ ಮಾತನಾಡುತ್ತೇನೆ. ಯಡಿಯೂರಪ್ಪ ಅವರು ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಮಾಡುತ್ತೆನೆ ಎಂದು ಸ್ಪಷ್ಟಪಡಿಸಿದ್ದಾರೆ. ಬಾಗಲಕೋಟೆಯಲ್ಲಿ ನಾವು ಸಂತ್ರಸ್ತರಿಗೆ ಆಹಾರದ ಕಿಟ್ ಗಳನ್ನು ಕೊಡಲು ಹೊಗುತ್ತಿದ್ದೆವೆ. ಇನ್ನು ಬೊಮ್ಮಾಯಿ ಅವರು ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ.ಅವರ ಅಡಳಿತವೂ ಕೂಡ ಸರ್ವರ ಒಳಿತುಗಾಗಿ ಆಡಳಿತ ಯಂತ್ರದ ಮೂಲಕ ನೆನೆಸಿಕೊಂಡು ಹೋಗಲಿ ಎಂದು ಶ್ರೀಗಳು ಸಲಹೆ ನೀಡಿದರು.
PublicNext
28/07/2021 01:56 pm