ನವದೆಹಲಿ: 2019 ನೇ ಸಾಲಿನ 'ಮಿಸ್ ಇಂಡಿಯಾ ದೆಹಲಿ' ಮಾನಸಿ ಸೇಹಗಲ್, ಆಮ್ ಆದ್ಮಿ ಪಾರ್ಟಿ ಸೇರುವ ಮೂಲಕ ಪಕ್ಷಕ್ಕೆ ಗ್ಲಾಮರ್ ಟಚ್ ನೀಡಿದ್ದಾರೆ. ಮಿಸ್ ಇಂಡಿಯಾ ದೆಹಲಿ ಆಡಿಷನ್ಸ್ನಲ್ಲಿ ಲೋಕೋಪಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದ್ದ ಸೆಹಗಲ್, ಈಗ ಎಎಪಿ ಮೂಲಕ ಸಾರ್ವಜನಿಕ ಸೇವೆಯನ್ನು ಕೈಗೆತ್ತಿಕೊಳ್ಳಲು ಅಪೇಕ್ಷಿಸಿದ್ದಾರೆ ಎನ್ನಲಾಗಿದೆ
ನೇತಾಜಿ ಸುಭಾಷ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿ.ಟೆಕ್. ಪದವಿ ಗಳಿಸಿರುವ ಮಾನ್ಸಿ ಸೆಹಗಲ್, ದ್ವಾರಕಾದ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದವರು. ಸೇಹಗಲ್ ತಮ್ಮದೇ ಒಂದು ಐಟಿ ಸ್ಟಾರ್ಟ್ಅಪ್ ಅನ್ನು ಸಹ ನಡೆಸುತ್ತಾರೆ. ಅವರ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಬಗ್ಗೆ ಟೆಡ್ಎಕ್ಸ್ ಸ್ಪೀಕರ್, ಇಂಜಿನಿಯರ್ ಮತ್ತು ಎಂಟ್ರೆಪ್ರೆನರ್ ಎಂದು ಬಣ್ಣಿಸಿಕೊಂಡಿದ್ದಾರೆ.
PublicNext
01/03/2021 09:02 pm