ಬೆಳಗಾವಿ: ಮಹದಾಯಿ ವಿಚಾರದಲ್ಲಿ ನಾವು ಯಾವ ಕಾರಣಕ್ಕೂ ಪಕ್ಷಬೇಧ ಮಾಡಲ್ಲ. ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದಿಂದ ನಿಯಮ ಉಲ್ಲಂಘಿಸಿಲ್ಲ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೋವಾ ಆರೋಪ ಮಾಡಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಕರ್ನಾಟಕ ಯಾವುದೇ ಕಾನೂನು ನಿಯಮ ಉಲ್ಲಂಘನೆ ಮಾಡಿಲ್ಲ. ಈ ಯೋಜನೆ ಬಗ್ಗೆ ಈಗಾಗಲೇ ಡಿಪಿಆರ್ ಮಾಡಲಾಗಿದೆ. ಅಂತರರಾಜ್ಯ ಇರೋದ್ರಿಂದ ಸದ್ಯಕ್ಕೆ ನೀರು ತೆಗೆದಕೊಳ್ಳಲು ಆಗದು. ಕರ್ನಾಟಕ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಕೇಂದ್ರ ಜಲಶಕ್ತಿ ಸಚಿವರು ಕರ್ನಾಟಕ, ಗೋವಾ ಸಚಿವರ ಜಂಟಿ ಸಭೆ ಮಾಡಲಿದ್ದಾರೆ. ಮಾತುಕತೆ ಮೂಲಕ ವಿವಾದ ಇತ್ಯರ್ಥಕ್ಕೆ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಉಪಚುನಾವಣೆ ಕುರಿತು ಮಾತನಾಡಿದ ಅವರು ಬಜೆಟ್ ಅಧಿವೇಶನ ಮುಗಿದ ಬಳಿಕ ಉಪಚುನಾವಣೆ ಕುರಿತು ಸಭೆ ನಡೆಸಾಲಗುವುದು ಈ ಬಾರಿಯ ಉಪ ಚುನಾವಣೆಯಲ್ಲಿ ಬಿಜೆಪಿ 5 ಲಕ್ಷ ಅಂತರದಿಂದ ಗೆಲ್ಲಲಿದೆ ಎಂದರು.
ಗೋಕಾಕ್ ಫಾಲ್ಸ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ಯೋಜನೆ ರೂಪಿಸಲು ಎಲ್ಲಾ ರೀತಿ ತಯಾರಿ ಮಾಡಲಾಗುತ್ತಿದೆ. ಚೀನಾ, ಅಮೆರಿಕಾ ನಂತರ ಗೋಕಾಕ್ ಫಾಲ್ಸ್ ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಿ ಗೋಕಾಕ್ ಪಾಲ್ಸ್ ಅನ್ನು ಉತ್ತಮ ಪ್ರವಾಸಿ ತಾಣ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
PublicNext
01/03/2021 08:10 pm