ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ಕಿನ ಮನುಷ್ಯ" ಸರ್ದಾರ್ ಪಟೇಲರ ಪಾದದ ಧೂಳಿಗೂ ಸಮನಲ್ಲದ "ತುಕ್ಕಿನ ಮನುಷ್ಯ" ಮೋದಿ

ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಗುಜರಾತ್ ನ ಅಹಮದಾಬಾದ್ ನಲ್ಲಿರುವ ಮೊಟೆರಾ ಸ್ಟೇಡಿಯಂ (ಸರ್ದಾರ್ ಪಟೇಲ್ ಸ್ಟೇಡಿಯಂ) ಹೆಸರನ್ನು 'ನರೇಂದ್ರ ಮೋದಿ ಸ್ಟೇಡಿಯಂ' ಎಂದು ಬುಧವಾರ ಮರು ನಾಮಕರಣ ಮಾಡಲಾಗಿತ್ತು.

ಇದು ರಾಜಕೀಯ ಜಗಳಕ್ಕೆ ಕಾರಣವಾಗಿದ್ದು, ಇದು ಸರ್ದಾರ್ ಪಟೇಲ್ ಅವರಿಗೆ ಅವಮಾನ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅತ್ತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಈ ಬಗ್ಗೆ ಟೀಕೆ ಮಾಡಿದ್ದು, ಇಡೀ ದೇಶಕ್ಕೇ ಮೋದಿ ಎಂದು ಹೆಸರಿಡಲಿ ಎಂದಿದ್ದರು.

ಸದ್ಯ ಅದೇ ವಿಷಯಕ್ಕೆ ಟೀಕಾಪ್ರಹಾರ ಮುಂದುವರೆಸಿದ ಕಾಂಗ್ರೆಸ್ "ಉಕ್ಕಿನ ಮನುಷ್ಯ" ಸರ್ದಾರ್ ಪಟೇಲರ ಪಾದದ ಧೂಳಿಗೂ ಸಮನಲ್ಲದ "ತುಕ್ಕಿನ ಮನುಷ್ಯ" ಪಟೇಲರಿಗಿಂತ ತಾನೇ ಮಹಾನ್ ವ್ಯಕ್ತಿ ಎಂದುಕೊಂಡು ಆತ್ಮರತಿಯಲ್ಲಿದ್ದಾನೆ!

ಖಾಸಗೀಕರಣ ಇದೆಲ್ಲದರ ನೆನಪು ಭಾರತೀಯರಿಗೆ ಸದಾ ಇರಲೆಂದು ತನ್ನ ಹೆಸರು ಇಟ್ಟಿದ್ದಾನೆ ಭಾರತೀಯರ ಪಾಲಿನ "ದುಬಾರಿ ಪಕೀರ"!! ಎಂದು ಸ್ವ ಹೇಳಿಕೆ ನೀಡಿ ಟ್ವೀಟ್ ಮಾಡಿದೆ.

Edited By : Nirmala Aralikatti
PublicNext

PublicNext

26/02/2021 01:25 pm

Cinque Terre

74 K

Cinque Terre

51