ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯತ್ನಾಳ್ ಪರ ಹಳ್ಳಿ ಹಕ್ಕಿ ಬ್ಯಾಟಿಂಗ್: ಅವರು ಪಕ್ಷದ ವಿರುದ್ಧ ಮಾತಾಡಿಲ್ಲ

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪದಲ್ಲಿ ನ್ಯಾಯ ಇದೆ. ಅವರು ಪಕ್ಷ, ಸರ್ಕಾರದ ವಿರುದ್ಧ ಹೇಳಿಕೆ ಕೊಟ್ಟಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಎಂ ಕುಟುಂಬದ ವಿರುದ್ಧ ಯತ್ನಾಳ್ ಆರೋಪ ಮಾಡಿದ್ದಾರೆ. ಜನ ವಿರೋಧಿ ಭಾಷಣಗಳನ್ನೂ‌ ಮಾಡಿಲ್ಲ. ಸರ್ಕಾರದ ರೀತಿ ನೀತಿಗಳ ಬಗ್ಗೆ ಹೇಳಿದ್ದಾರೆ. ಮುಖ್ಯಮಂತ್ರಿಗಳ ಕುಟುಂಬ, ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ.

ಜನರಿಗೆ ಸರ್ಕಾರ ತಿಳುವಳಿಕೆ ನೀಡಬೇಕು. ಬರೀ ಮನವಿ ಸ್ವೀಕರಿಸಿದರೆ ಎಲ್ಲವೂ‌ ಮುಗಿಯಲ್ಲ. ಸರ್ಕಾರ ಯಾವ ವಿಚಾರದಲ್ಲೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ. ಪಂಚಮಸಾಲಿ ಯತಿಗಳು ಈಗಲೇ ಘೋಷಿಸಬೇಕು ಅಂತಾರೆ. ಕುರುಬ ಸಮುದಾಯ ಕೂಡ ಮೀಸಲಾತಿ ಕೇಳುತ್ತಿದೆ. ಕುಲಶಾಸ್ತ್ರ ಅಧ್ಯಯನ ಆಗಬೇಕಿದೆ. ಸರ್ಕಾರ ನಮಗೆ ಸಂಬಂಧವೇ ಇಲ್ಲ ಎಂಬಂತೆ ಸುಮ್ಮನಿದೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.

Edited By : Nagaraj Tulugeri
PublicNext

PublicNext

24/02/2021 08:05 pm

Cinque Terre

79.61 K

Cinque Terre

6

ಸಂಬಂಧಿತ ಸುದ್ದಿ