ಹೈದರಾಬಾದ್: ತೆಲುಗು ಸುದ್ದಿ ವಾಹಿನಿಯೊಂದರ ನೇರ ಚರ್ಚಾ ಕಾರ್ಯಕ್ರಮದ ವೇಳೆ ಆಂಧ್ರ ಪ್ರದೇಶದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್. ವಿಷ್ಣುವರ್ಧನ್ ರೆಡ್ಡಿ ಅವರತ್ತ ಚಪ್ಪಲಿ ಎಸೆದ ಘಟನೆ ನಡೆದಿದೆ.
ಅಮರಾವತಿ ಪರಿರಕ್ಷಣಾ ಸಮಿತಿಯ ಜಂಟಿ ಕ್ರಿಯಾ ಸಮಿತಿ ಸದಸ್ಯ ಕೆ.ಶ್ರೀನಿವಾಸ ರಾವ್ ಹಾಗೂ ವಿಷ್ಣುವರ್ಧನ್ ರೆಡ್ಡಿ ಸೇರಿದಂತೆ ಕೆಲ ಮುಖಂಡರು ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಶ್ರೀನಿವಾಸ ರಾವ್ ಅವರು ಟಿಡಿಪಿ ಜೊತೆ ನಂಟು ಹೊಂಡಿದ್ದಾರೆ ಎಂದು ವಿಷ್ಣುವರ್ಧನ್ ರೆಡ್ಡಿ ಆರೋಪಿಸಿದರು. ಇದರಿಂದಾಗಿ ಮಾತಿಗೆ ಮಾತು ಬೆಳೆಯಿತು. ಈ ಮಧ್ಯೆ ಕೋಪಗೊಂಡ ರಾವ್ ರೆಡ್ಡಿ ಅವರತ್ತ ಚಪ್ಪಲಿ ಎಸೆದಿದ್ದಾರೆ.
ತಕ್ಷಣವೇ ಟಿವಿ ವಾಹಿನಿ ವಿರಾಮ ತೆಗೆದುಕೊಂಡಿತು. ಹೀಗಾಗಿ ಮುಂದೆ ಏನು ನಡೆಯಿತು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
PublicNext
24/02/2021 03:35 pm