ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ಗೆ ಶಾಕ್ : ಪುದುಚೇರಿಯಲ್ಲಿ ಸರ್ಕಾರ ಪತನ!

ಪುದುಚೇರಿ: ಇಬ್ಬರು ಶಾಸಕರ ರಾಜಿನಾಮೆಯಿಂದ ಅಲ್ಪ ಮತಕ್ಕೆ ಕುಸಿದಿದ್ದ ಸಿಎಂ ನಾರಾಯಣ ಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಶ್ವಾಸಮತಯಾಚನೆಯಲ್ಲಿ ವಿಫಲವಾಗಿದ್ದು ಕಾಂಗ್ರೆಸ್ ಸರ್ಕಾರ ಪತನವಾಗಿದೆ. ಪಾಂಡಿಚೇರಿಯ ಲೆಫ್ಟಿನೆಂಟ್ ಗೌರ್ನರ್ ತಮಿಳ್ ಸಾಯಿ ಸೌಂದರಾಜನ್ ಅವರು ನಾರಾಯಣಸ್ವಾಮಿ ಅವರ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ಸೋಮವಾರದವರೆಗೆ ಗಡುವು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪಾಂಡಿಚೇರಿ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತಯಾಚನೆಯಲ್ಲಿ ಸುದೀರ್ಘ ಭಾಷಣ ಮಾಡಿದ ನಾರಾಯಣಸ್ವಾಮಿಯವರು ನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದ್ದಾರೆ.

ಫ್ಲೋರ್ ಟೆಸ್ಟ್ಗೂ ಮೊದಲು ಮಾತನಾಡಿದ ಮುಖ್ಯಮಮತ್ರಿ ನಾರಾಯಣಸ್ವಾಮಿ ಶಾಸಕರು ಪಕ್ಷದ ಪರ ಪ್ರಾಮಾಣಿಕರಾಗಿರಬೇಕು. ರಾಜೀನಾಮೆ ನೀಡಿದ ಶಾಸಕರು ಜನರೆದುರು ಯಾವ ಮುಖ ಹಿಡಿದು ನಿಲ್ಲುತ್ತಾರೆ? ಯಾಕೆಂದರೆ ಇವರೆಲ್ಲರನ್ನೂ ಮತದಾರರು ಅವಕಾಶವಾದಿಗಳೆನ್ನುತ್ತಾರೆ. ಶೀಘ್ರದಲ್ಲಿ ಇಲ್ಲಿನ ಜನರು ಬಿಜೆಪಿ ಹಾಗೂ AIADMKಗೆಡ ಬುದ್ಧಿ ಕಲಿಸುತ್ತಾರೆ ಎಂದಿದ್ದಾರೆ.

ಇನ್ನು ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧವೂ ನಾರಾಯಣಸ್ವಾಮಿ ಗುಡುಗಿದ್ದಾರೆ. ಕಿರಣ್ ಬೇಡಿ ಹಾಗೂ ಕೇಂದ್ರ ಸರ್ಕಾರ ವಿಪಕ್ಷದ ಜೊತೆ ಸೇರಿ ಸರ್ಕಾರ ಬೀಳಿಸಲು ಯತ್ನಿಸಿದ್ದಾರೆ. ಒಂದು ವೇಳೆ ನಮ್ಮ ಶಾಸಕರು ನಮ್ಮೊಂದಿಗಿರುತ್ತಿದ್ದರೆ ಸರ್ಕಾರ ಐದು ವರ್ಷ ಅಧಿಕಾರ ನಡೆಸುತ್ತಿತ್ತು ಎಂದೂ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

22/02/2021 01:17 pm

Cinque Terre

80.57 K

Cinque Terre

9

ಸಂಬಂಧಿತ ಸುದ್ದಿ