ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಬೇಕೆಂಬ ಬೇಡಿಕೆ ಇಟ್ಟು ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ನಿನ್ನೆ ಫೆ. 21ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿದ ನಂತರ ಮಾರ್ಚ್ 4ರವರೆಗೆ ಧರಣಿ ಸತ್ಯಾಗ್ರಹ ನಡೆಸೋದಾಗಿ ಹೋರಾಟದ ನೇತೃತ್ವ ವಹಿಸಿರುವ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಸರ್ಕಾರದ ಪರವಾಗಿ ಮನವಿ ಮಾಡಿದ ಸಚಿವರಾದ ಸಿ. ಸಿ ಪಾಟೀಲ್, ಹಾಗೂ ಮುರುಗೇಶ್ ನಿರಾಣಿ, ನಾವು ಸರ್ಕಾರವನ್ನು ಒಪ್ಪಿಸುತ್ತೇವೆ. ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈ ಬಿಡಿ ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮನವಿ ಕೊಟ್ಟು ಕೊಟ್ಟು ನಮ್ಮ ಕೈ ಸೋತಿವೆ. ಮೀಸಲಾತಿ ಸಿಗುವವರೆಗೂ ನಾವ್ಯಾರೂ ಪ್ರತಿಭಟನೆ ಕೈ ಬಿಡೋದಿಲ್ಲ ಎಂದಿದ್ದಾರೆ.
PublicNext
22/02/2021 10:06 am