ಬೆಂಗಳೂರು: ನಮ್ಮ ಮನೆಗೂ ವಿವಾದಿತ ಮಂದಿರ ದೇಣಿಗೆ ಕೇಳುವುದಕ್ಕೆ ಬಂದಿದ್ದರು. ಆದರೆ ನಾನು ಕೊಡಲ್ಲ ಹೋಗಿ ಅಂದಿದ್ದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಅವರು, ''ವಿವಾದಿತ ಮಂದಿರ ನಿರ್ಮಾಣಕ್ಕೆ ನಾನು ದೇಣಿಗೆ ನೀಡುವುದಿಲ್ಲ. ಅದರ ಬದಲಿಗೆ ಬೇರೆ ಕಡೆ ಮಂದಿರ ಕಟ್ಟುವುದಾದರೆ ದೇಣಿಗೆ ನೀಡುತ್ತೇನೆ. ಅಷ್ಟೇ ಅಲ್ಲದೆ ರಾಮ ಮಂದಿರ ನಿರ್ಮಾಣಕ್ಕೆ ಸಂಗ್ರಹಿಸುತ್ತಿರುವ ದೇಣಿಗೆ ಬಗ್ಗೆ ಮಾಹಿತಿ ನೀಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ಈ ಹಿಂದೆಯೇ ಇಟ್ಟಿಗೆ ಮತ್ತು ಹಣ ಸಂಗ್ರಹಿಸಲಾಗಿತ್ತು. ಆದರೆ ಇಟ್ಟಿಗೆಯನ್ನು ಊರಾಚೆ ಬಿಸಾಡಿದರು. ಹಣವನ್ನು ತೆಗೆದುಕೊಂಡು ಹೋಗಿದ್ದರು. ಇದೆಲ್ಲಾ ರಾಮನ ಲೆಕ್ಕ, ಕೃಷ್ಣ ಲೆಕ್ಕ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
PublicNext
16/02/2021 05:15 pm