ಅಗರ್ತಲಾ: ನೇಪಾಳ ಮತ್ತು ಶ್ರೀಲಂಕಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳನ್ನು ಸ್ಥಾಪಿಸಲು ಗೃಹ ಸಚಿವ ಅಮಿತ್ ಶಾ ಯೋಜನೆ ಹೊಂದಿದ್ದಾರೆ ಎಂದು ತ್ರಿಪುರ ಸಿಎಂ ಬಿಪ್ಲಾಬ್ ದೇಬ್ ಹೇಳಿದ್ದಾರೆ.
2018 ರ ತ್ರಿಪುರ ವಿಧಾನಸಭಾ ಚುನಾವಣೆಗೆ ಮೊದಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಅಮಿತ್ ಶಾ ಈ ರೀತಿ ಹೇಳಿದ್ದರು. ನಾವು ರಾಜ್ಯ ಅತಿಥಿ ಗೃಹದಲ್ಲಿ ಚರ್ಚಿಸುತ್ತಿದ್ದೆವು. ಆಗ ಅಜಯ್ ಜಾಮ್‌ವಾಲ್ ಅವರು ಬಿಜೆಪಿ ಅನೇಕ ರಾಜ್ಯಗಳಲ್ಲಿ ಸರ್ಕಾರ ರಚಿಸಿದೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ಇನ್ನು ಶ್ರೀಲಂಕಾ ಮತ್ತು ನೇಪಾಳಗಳು ಉಳಿದಿವೆ ಎಂದು ಹೇಳಿದ್ದರು. ನಾವು ನೇಪಾಳ ಮತ್ತು ಶ್ರೀಲಂಕಾಕ್ಕೆ ಪಕ್ಷವನ್ನು ವಿಸ್ತರಿಸಬೇಕು ಹಾಗೂ ಅಲ್ಲಿ ಸರ್ಕಾರ ರಚಿಸಲು ಜಯಗಳಿಸಬೇಕು' ಎಂದು ಅಮಿತ್ ಶಾ ಹೇಳಿದ್ದಾಗಿ ಬಿಪ್ಲಬ್ ನೆನಪಿಸಿಕೊಂಡಿದ್ದಾರೆ.
PublicNext
15/02/2021 09:45 pm