ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕಿಸ್ತಾನಿಗಳನ್ನು ಚುಚ್ಚುತ್ತಿರುವ ಪ್ರಧಾನಿ ಗಡ್ಡ

ಅವರವರ ಭಾವಕ್ಕೆ ಎಂಬಂತೆ ಪ್ರಧಾನಿ ಮೋದಿ ಏನೆ ಮಾಡಲಿ, ಏನೇ ನುಡಿಯಲಿ ಅದಕ್ಕೊಂದು ಅರ್ಥ, ಅಪಾರ್ಥ ಕಲ್ಪಿಸುವ ವರ್ಗವಿದೆ. ತಮ್ಮದೇ ಮೂಗಿನ ನೇರಕ್ಕೆ ವಿಶ್ಲೇಷಿಸುವವರಿಗೂ ಕಡಿಮೆ ಇಲ್ಲ. ಇಷ್ಟೇ ಅಲ್ಲ ಮೋದಿ ಅವರು ಧರಿಸುವ ಬಟ್ಟೆಯಲ್ಲಿ ಸ್ವಲ್ಪ ಬದಲಾವಣೆಯಾದರೂ ಕಥೆ ಕಟ್ಟುವವರಿದ್ದಾರೆ.

ಈಗ ಮೋದಿ ಇವರ ನೀಳಗಡ್ಡ ಪಕ್ಕದ ಪಾಕಿಸ್ತಾನಿಯರಿಗೂ ಚುಚ್ಚತೊಡಗಿದೆ. ಅಲ್ಲಿಯ ಜ್ಯೋತಿಷಿಯೊಬ್ಬರು ಮೋದಿ ಬಗ್ಗೆ ಮಾಡಿದ ವಿಲಕ್ಷಣ ಟೀಕೆ ಟಿಪ್ಪಣಿಗಳು ಟಿವಿಯಲ್ಲಿ ಪ್ರಸಾರವಾಗಿದೆಯಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಮೋದಿ ಉದ್ದೇಶಪೂರ್ವಕವಾಗಿ ಗಡ್ಡ ಟ್ರಿಮ್ ಮಾಡಿಸುತ್ತಿಲ್ಲ, ಕೂದಲು ಕತ್ತರಿಸುತ್ತಿಲ್ಲ, ‘ಅಖಂಡ್ ಭಾರತ್’ ಕನಸನ್ನು ಸಾಧಿಸಲು ‘ಹವನ’ಗಳನ್ನು ಕೈಗೊಳ್ಳುತ್ತಿದ್ದಾರೆ. ನಂ .1 ನಾಯಕನಾಗಲು ಹಾಗೂ ‘ ಕಲ್ಕಿ ’ಅವತಾರಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಪಾಕ್ ಜ್ಯೋತಿಷಿ ಬಡಬಡಾಯಿಸಿದ್ದಾರೆ. ಭಾರತದ ಯೋಜನೆಗಳಿಂದ ಕಂಗಾಲಾಗಿರುವ ಈ ಜ್ಯೋತಿಷಿ, ಪಿಎಂ ಮೋದಿ ಅವರ ‘ಅಖಂಡ್ ಭಾರತ್’ ಕನಸು ನನಸಾಗಿಲ್ಲ ಎಂದು ವಿಶ್ಲೇಷಿಸಿದ್ದಾರೆ.

ಪಾಕಿಸ್ತಾನದ ನಿರೂಪಕ ಮತ್ತು ಪತ್ರಕರ್ತ ನೈಲಾ ಇನಾಯತ್ ಅವರು ಹಂಚಿಕೊಂಡ ವೀಡಿಯೊದಲ್ಲಿ, ಪಾಕಿಸ್ತಾನದ ವ್ಯಾಖ್ಯಾನಕಾರರು ಹೀಗೆ ಹೇಳಿದ್ದಾರೆ “ಪ್ರಧಾನಿ ಮೋದಿ ಅವರು ಬೆಳೆಸಿದ ಗಡ್ಡ ಮತ್ತು ಮೀಸೆ ನೋಡಿದರೆ, ಔರಂಗಜೇಬನ ವಿರುದ್ಧ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರನ್ನು ಹೋಲುವ ಉದ್ದೇಶವಿರಬಹುದು ಆದರೆ ಇದು ತಪ್ಪು ಸಂದೇಶ ರವಾನಿಸಬಹುದು ಎಂದೂ ವ್ಯಂಗ್ಯವಾಡಿದ್ದಾರೆ.

Edited By :
PublicNext

PublicNext

13/02/2021 06:40 pm

Cinque Terre

103.4 K

Cinque Terre

34