ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಅಳಿಯ'ನ ಲಾಭಕ್ಕಾಗಿ ಯಾವ ಕೆಲಸವನ್ನೂ ಸರ್ಕಾರ ಮಾಡ್ತಿಲ್ಲ: 'ಕೈ' ಕುಟುಕಿದ ಸೀತಾರಾಮನ್

ನವದೆಹಲಿ: ಅಳಿಯನ ಲಾಭಕ್ಕಾಗಿ ಯಾವ ಕೆಲಸವನ್ನೂ ಸರ್ಕಾರ ಮಾಡುತ್ತಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್‌ ನಾಯಕಿ ಸೋನಿ ಗಾಂಧಿ ಅವರನ್ನು ಕುಟುಕಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ''ಮುದ್ರಾ ಯೋಜನೆಯಡಿ ಕೇಂದ್ರ ಸರ್ಕಾರ 27 ಸಾವಿರ ಕೋಟಿ ರೂ. ಸಾಲ ನೀಡಿದೆ. ಈ ಸಾಲವನ್ನು ಯಾರು ತೆಗೆದುಕೊಂಡರು? ಅಳಿಯಂದಿರಾ'' ಎಂದು ರಾಜ್ಯಸಭೆಯಲ್ಲಿ ಪ್ರಶ್ನಿಸಿದರು. ಇದರಿಂದಾಗಿ ಸದನದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಈ ವೇಳೆ ‘ಅಳಿಯ’ ಪದದ ವ್ಯಾಖ್ಯಾನವನ್ನು ಮುಂದುವರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಅಳಿಯ’ ಎಂಬ ಪದ ಕಾಂಗ್ರೆಸ್ ಪಕ್ಷದ ಟ್ರೇಡ್‌ ಮಾರ್ಕ್‌ ಅಲ್ಲ ಎಂದು ಭಾವಿಸುತ್ತೇನೆ ಎಂದು ವ್ಯಂಗ್ಯವಾಡಿದರು.

ಇಷ್ಟಕ್ಕೆ ವಾಗ್ದಾಳಿ ನಿಲ್ಲಿಸದ ಅವರು, ''ದೇಶದಲ್ಲಿ ಡಿಜಿಟಲ್ ಪೇಮೆಂಟ್ ಹೆಚ್ಚುತ್ತಿದೆ. ಯುಪಿಐ ಪಾವತಿಯಿಂದಾಗಿ ಮಧ್ಯಮ ವರ್ಗಕ್ಕೆ, ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗುತ್ತಿದೆ. ಇದನ್ನು ಸರ್ಕಾರ ಮಾಡುತ್ತಿದೆಯೇ? ಸಿರಿವಂತರಿಗೆ ಅಥವಾ ಕೆಲವು ಅಳಿಯಂದಿರಿಗೆ ಅನುಕೂಲವಾಗುವಂತೆ ಮಾಡುತ್ತಿದ್ದೇವಾ ಎಂದು ತರಾಟೆ ತೆಗೆದುಕೊಂಡರು.

Edited By : Vijay Kumar
PublicNext

PublicNext

12/02/2021 04:04 pm

Cinque Terre

65.53 K

Cinque Terre

26