ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೀನಾಕ್ಕೆ ನಮ್ಮ ಭೂಮಿ ನೀಡಿದ ಪ್ರಧಾನಿ ಮೋದಿ ಒಬ್ಬ ರಣಹೇಡಿ: ರಾಹುಲ್ ವ್ಯಗ್ರ

ನವದೆಹಲಿ: ‘ಚೀನಿಯರ ಮುಂದೆ ನಿಲ್ಲಲಾಗದ ಪ್ರಧಾನಿ ಮೋದಿ ಒಬ್ಬ ರಣಹೇಡಿ , ಅವರು ನಮ್ಮ ಸೈನ್ಯದ ತ್ಯಾಗದ ಮೇಲೆ ಉಗುಳುತ್ತಿದ್ದಾರೆ" ನಮ್ಮ ಸೈನ್ಯದ ತ್ಯಾಗಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದ ದೆಹಲಿಯ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಪದಪುಂಜಗಳನ್ನು ಬಳಸಿದ ರಾಹುಲ್ ,ಭಾರತದಲ್ಲಿ ಈ ರೀತಿ ಮಾಡಲು ಯಾರಿಗೂ ಅವಕಾಶ ನೀಡಬಾರದು" ಎಂದು ಹೇಳಿದ್ದಾರೆ.

ಬುಧವಾರ ಸಂಸತ್ತಿನಲ್ಲಿ, ಪೂರ್ವ ಲಡಾಕ್ ನಲ್ಲಿನ ಪರಿಸ್ಥಿತಿ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, "ಈಗ, ನಮ್ಮ ಸೈನ್ಯವು ಫಿಂಗರ್ 3 ನಲ್ಲಿ ಬೀಡುಬಿಟ್ಟಿದೆ. ಫಿಂಗರ್ 4 ನಮ್ಮ ಪ್ರದೇಶವಾಗಿದೆ. ಈಗ ನಾವು ಫಿಂಗರ್ 4 ನಿಂದ ಫಿಂಗರ್ 3ಕ್ಕೆ ಸ್ಥಳಾಂತರಗೊಂಡಿದ್ದೇವೆ. ಪ್ರಧಾನಿ ಮೋದಿ ನಮ್ಮ ಪ್ರದೇಶವನ್ನು ಚೀನಿಯರಿಗೆ ಏಕೆ ಬಿಟ್ಟುಕೊಟ್ಟಿದ್ದಾರೆ? " ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಚೀನಾ ಪ್ರವೇಶಿಸಿದ ಪ್ರಮುಖ ಕಾರ್ಯತಂತ್ರದ ಪ್ರದೇಶವಾದ ಡೆಪ್ಸಾಂಗ್ ಪ್ಲೇನ್ಸ್ ಪ್ರದೇಶದ ಬಗ್ಗೆ ರಕ್ಷಣಾ ಸಚಿವರು ಒಂದು ಮಾತನ್ನೂ ಆಡಲಿಲ್ಲ ಎಂದು ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಸತ್ಯವೇನೆಂದರೆ ಪ್ರಧಾನಿಯು ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ. ಅವರು ದೇಶಕ್ಕೆ ಉತ್ತರಿಸಬೇಕು" ಎಂದು ರಾಹುಲ್ ಗಾಂಧಿ ಒತ್ತಾಯಿಸಿದರು.

Edited By :
PublicNext

PublicNext

12/02/2021 12:05 pm

Cinque Terre

116.7 K

Cinque Terre

59

ಸಂಬಂಧಿತ ಸುದ್ದಿ