ನವದೆಹಲಿ: ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು 'ಆಂದೋಲನ ಜೀವಿ' ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ''Crony ಜೀವಿ ದೇಶವನ್ನು ಮಾರುತ್ತಿದೆ” ಎಂದು ವಾಗ್ದಾಳಿ ನಡೆಸಿದೆ. Crony ಎಂದರೆ ಸ್ನೇಹಿತ ಅಥವಾ ಅಧಿಕಾರದಲ್ಲಿರುವ ಯಾರಿಗಾದರೂ ಕೆಲಸ ಮಾಡುವ ವ್ಯಕ್ತಿ. ಅದರಲ್ಲೂ ವಿಶೇಷವಾಗಿ ಅಪ್ರಾಮಾಣಿಕ ಸಹಾಯವನ್ನು ನೀಡಲು, ಸ್ವೀಕರಿಸಲು ಸಿದ್ಧರಿರುವವನು.
PublicNext
10/02/2021 07:45 pm