ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ದೋಷಾರೋಪ ವಿಚಾರಣೆ ಸೆನೆಟ್ನಲ್ಲಿ ಮಂಗಳವಾರ ಔಪಚಾರಿಕವಾಗಿ ನಡೆದಿದೆ. ಇತಿಹಾಸದಲ್ಲಿ ಎರಡು ಬಾರಿ ದೋಷಾರೋಪಣೆಗೆ ಒಳಗಾದ ಏಕೈಕ ಅಮೆರಿಕ ಅಧ್ಯಕ್ಷ ಎಂಬ ಅಪಖ್ಯಾತಿ ಇವರದ್ದಾಗಿದೆ. ಇದು ಮಾಜಿ ಅಧ್ಯಕ್ಷರ ಮೊಕದ್ದಮೆ ವಿಚಾರಣೆಯಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ನಿರ್ಭಯದಿಂದ ಅಮೆರಿಕದ ಕ್ಯಾಪಿಟಲ್ನಲ್ಲಿ ದಂಗೆಯನ್ನು ಪ್ರಚೋದಿಸಬಹುದೇ ಎಂಬ ಪ್ರಶ್ನೆಗೆ ಟ್ರಂಪ್ ಉತ್ತರ ನೀಡಬೇಕಿದೆ.
ಅಮೆರಿಕ ಕ್ಯಾಪಿಟಲ್ನಲ್ಲಿ ಜನವರಿ 6ರಂದು ನಡೆದ ಗಲಭೆಯಲ್ಲಿ ಅವರ ಪಾತ್ರದ ಬಗ್ಗೆ ಸರ್ಕಾರದ ವಿರುದ್ಧ ಹಿಂಸಾಚಾರ ಪ್ರಚೋದಿಸಿದ್ದಕ್ಕಾಗಿ ಮಾಜಿ ಅಧ್ಯಕ್ಷರ ವಿರುದ್ಧ ಕಳೆದ ತಿಂಗಳು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ದೋಷಾರೋಪಣೆ ಮಾಡಿತ್ತು. ಅಮೆರಿಕ ಇತಿಹಾಸದಲ್ಲಿ ಇದುವರೆಗೂ ನಾಲ್ಕು ದೋಷಾರೋಪಣೆಗಳ ಕುರಿತು ವಿಚಾರಣೆಯಾಗಿವೆ.
PublicNext
10/02/2021 12:05 pm