ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಯಮಬಾಹಿರವಾಗಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ಆರೋಪ

ಬೆಂಗಳೂರು: ನಿಯಮಬಾಹಿರವಾಗಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ಮಾಡಲಾಗಿದೆ ಎಂದು ವಿಧಾನ ಪರಿಷತ್‌ನಲ್ಲಿ ಇಂದು ಕಾಂಗ್ರೆಸ್‌ ಸದಸ್ಯರು ಆರೋಪಿಸಿ ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಸದನ ಕಲಾಪ ಸಲಹಾ ಸಮಿತಿ ಸಭೆಯ ಬಳಿಕವೂ ಕಾಂಗ್ರೆಸ್ ಸದಸ್ಯರು ತಮ್ಮ ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ ಕೊಡದೆ ವಿಧೇಯಕ ಮಂಡನೆ ಮಾಡಲಾಗಿದೆ ಎಂದು ಕಾಂಗ್ರೆಸ್​ ಸದಸ್ಯ ನಾರಾಯಣ ಸ್ವಾಮಿ ಸಭಾಪತಿಗಳಿಗೆ ಮನವಿ ಮಾಡಿದರು.

ಬಳಿಕ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ''ಗೋ ಹತ್ಯೆ ನಿಷೇಧ ವಿಚಾರವಾಗಿ ಈಗ ಸಭೆಯಲ್ಲಿ ಚರ್ಚೆಯಾಗಿದೆ. ವಿಧೇಯಕಕ್ಕೆ ಸಂಬಂಧಿಸಿದಂತೆ ನಾನು ವಿಡಿಯೋ, ಆಡಿಯೋಗಳನ್ನು ಕೇಳಿದ್ದೇನೆ. ತಮ್ಮ ಸ್ಥಾನದಲ್ಲಿ ನಿಂತು ವಿಧೇಯಕ ಮಂಡಿಸಬೇಕು. ನಿಯಮಾವಳಿಯ ಮೂಲಕ ನಾವು ವಿಧೇಯಕ ಮಂಡಿಸಬೇಕು. ನಿಮ್ಮ ಬಳಿ ಇರುವ ದಾಖಲೆಗಳನ್ನು ನೀಡಿ. ಅದನ್ನು ಪರಿಶೀಲನೆ ಮಾಡಿ ನಾವು ಚರ್ಚೆ ಮಾಡುತ್ತೇವೆ. ತಮ್ಮ ಸ್ಥಾನದಲ್ಲಿ ನಿಂತು ಚರ್ಚೆಗೆ ಕೇಳಬೇಕು'' ಎಂದು ಹೇಳಿದರು.

ವಿಧೇಯಕ ಅಂಗೀಕಾರ ಸಂದರ್ಭದಲ್ಲಿ ತಮ್ಮ ಸ್ಥಾನದಲ್ಲಿ ನಿಂತು ಮತಕ್ಕೆ ಬೇಡಿಕೆ ಇಟ್ಟಿಲ್ಲ. ಬಾವಿಯೊಳಗೆ ಬಂದು ಬೇಡಿಕೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ವಿಧೇಯಕ ಅಂಗೀಕಾರ ಪ್ರಕ್ರಿಯೆ ಸರಿಯಾಗಿದೆ ಎಂದು ಸಭಾಪತಿ ರೂಲಿಂಗ್ ಕೊಟ್ಟರು. ಆದರೆ ನಾನು ಸದಸ್ಯರ ಸ್ಥಳದಲ್ಲಿ ನಿಂತು ಮತಕ್ಕೆ ಹಾಕುವಂತೆ ಬೇಡಿಕೆ ಇಟ್ಟಿದ್ದೇವೆ. ನಜೀರ್ ಅಹ್ಮದ್ ಹಾಗೂ ಸಿಎಂ ಇಬ್ರಾಹಿಂ ತಮ್ಮ ಸ್ಥಾನದಲ್ಲಿ ಮತಕ್ಕೆ ಹಾಕುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಎಂ. ನಾರಾಯಣಸ್ವಾಮಿ ಹೇಳಿದರು. ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ ಕೊಡದೆ ವಿಧೇಯಕ ಮಂಡನೆ ಮಾಡಲಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸದಸ್ಯರ ನಡೆಗೆ ಸಭಾಪತಿ ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿ, ರೂಲಿಂಗ್ ಕೊಟ್ಟ ಬಳಿಕ ಪ್ರಶ್ನೆ ಮಾಡುವುದು ಸರಿಯಲ್ಲ. ನಿಯಮದ ಪ್ರಕಾರ ನಿಮ್ಮ ಅಭಿಪ್ರಾಯ ತಿಳಿಸಿ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.

Edited By : Vijay Kumar
PublicNext

PublicNext

09/02/2021 07:34 pm

Cinque Terre

57.38 K

Cinque Terre

6