ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ನೂತನ ಜಿಲ್ಲೆಯಾಗಿ 'ವಿಜಯನಗರ' ಅಧಿಕೃತ ಘೋಷಣೆ

ಬೆಂಗಳೂರು: ರಾಜ್ಯ ಸರ್ಕಾರವು ನೂತನ ಜಿಲ್ಲೆಯಾಗಿ 'ವಿಜಯನಗರ'ವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ರಾಜ್ಯದ 31ನೇ ಜಿಲ್ಲೆ ವಿಜಯನಗರಕ್ಕೆ ಜಿಲ್ಲಾಕೇಂದ್ರವಾಗಿ ಹೊಸಪೇಟೆಯನ್ನು ಘೋಷಣೆ ಮಾಡಲಾಗಿದೆ. ಪರ, ವಿರೋಧದ ನಡುವೆಯೇ ಇಂದು ಜಿಲ್ಲೆ ಘೋಷಣೆ ಮಾಡಲಾಗಿದೆ. ಈ ಮೂಲಕ ಎರಡು ದಶಕಗಳ ಹೋರಾಟಕ್ಕೆ ಸಂದ ಜಯ ಇದಾಗಿದೆ.

ನೂತನ ಜಿಲ್ಲೆ ವಿಜಯನಗರಕ್ಕೆ 6 ತಾಲೂಕುಗಳು ಸೇರ್ಪಡೆಗೊಂಡಿವೆ. ಇನ್ನು 5 ತಾಲೂಕುಗಳು ಬಳ್ಳಾರಿಯಲ್ಲಿ ಉಳಿದುಕೊಂಡಿವೆ. ಯಾವ ಜಿಲ್ಲೆಗೆ ಯಾವೆಲ್ಲಾ ತಾಲೂಕುಗಳು?

ವಿಜಯನಗರ: ಹೊಸಕೋಟೆ, ಕೂಡ್ಲಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನ ಹಡಗಲಿ, ಹರಪ್ಪನಹಳ್ಳಿ.

ಬಳ್ಳಾರಿ: ಬಳ್ಳಾರಿ, ಕುರುಗೋಡು, ಸಿರಗುಪ್ಪ, ಕಂಪ್ಲಿ, ಸಂಡೂರು.

Edited By : Vijay Kumar
PublicNext

PublicNext

08/02/2021 03:29 pm

Cinque Terre

66.08 K

Cinque Terre

7