ಕೃಷ್ಣಗಿರಿ: ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದ ಎಐಎಡಿಎಂಕೆ ಉಚ್ಛಾಟಿತ ನಾಯಕಿ ವಿ.ಕೆ.ಶಶಿಕಲಾ ಸೋಮವಾರ (ಫೆ.08) ತಮಿಳುನಾಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೆಂಬಲಿಗರ ಎರಡು ಕಾರುಗಳು ಆಕಸ್ಮಿಕವಾಗಿ ಬೆಂಕಿ ಹಿಡಿದು ಸುಟ್ಟು ಹೋದ ಘಟನೆ ಕೃಷ್ಣಗಿರಿ ಟೋಲ್ ಗೇಟ್ ಸಮೀಪ ನಡೆದಿದೆ.
ಕೃಷ್ಣಗಿರಿ ಟೋಲ್ ಬಳಿ ಪಟಾಕಿ ಸಿಡಿದು ಶಶಿಕಲಾ ಬೆಂಬಲಿಗರ ಕಾರು ಸಂಪೂರ್ಣ ಭಸ್ಮವಾಗಿವೆ. ಚಿನ್ನಮ್ಮ ಚೆನ್ನೈಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಅವರ ಅಭಿಮಾನಿಗಳು ಅದ್ಧೂರಿ ಸ್ವಾಗತಕ್ಕೆ ತಯಾರಿ ಮಾಡಿಕೊಂಡಿದ್ದರು. ಸ್ವಾಗತದ ಸಂಭ್ರಮದ ಮಧ್ಯೆ ಈ ಅವಘಡವೊಂದು ಸಂಭವಿಸಿದೆ. ಸ್ವಾಗತಕ್ಕೆಂದು ಪಟಾಕಿಯನ್ನು ಹೊತ್ತು ತರುತ್ತಿದ್ದ ಕಾರ್, ಬೆಂಕಿಗಾಹುತಿಯಾಗಿದೆ.
PublicNext
08/02/2021 01:33 pm