ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾವು ಯಾವುದೇ ಕ್ಷೇತ್ರಕ್ಕೆ ತಾರತಮ್ಯ ಮಾಡಿಲ್ಲ: ಕೆ.ಎಸ್. ಈಶ್ವರಪ್ಪ

ಬೆಂಗಳೂರು: ಯಾವುದೇ ಕ್ಷೇತ್ರಗಳಿಗೂ ತಾರತಮ್ಯ ಮಾಡದೇ, ಪ್ರತಿ ಕ್ಷೇತ್ರಗಳಿಗೂ ಸಮಾನವಾಗಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.

ಪ್ರಶ್ನೋತ್ತರ ವೇಳೆ ಕಾಂಗ್ರೆಸ್‍ ಸದಸ್ಯ ವಿ. ಮುನಿಯಪ್ಪ ಅವರು ನಮ್ಮ ಕ್ಷೇತ್ರಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡದೇ ತಾರತಮ್ಯ ಮಾಡುತ್ತಿದೆ. ಸರ್ಕಾರ ಎಂದ ಮೇಲೆ ಎಲ್ಲ ಕ್ಷೇತ್ರಗಳನ್ನು ಸಮಾನಾಗಿ ಕಾಣಬೇಕು. ಹೀಗಾದರೆ ಇದೇ ಸರಿಯೇ ಎಂದು ಪ್ರಶ್ನಿಸಿದರು. ಸದಸ್ಯರ ಈ ಆರೋಪವನ್ನು ಅಲ್ಲಗೆಳೆದ ಈಶ್ವರಪ್ಪನವರು, ನಾವು ಯಾವ ಕ್ಷೇತ್ರವನ್ನೂ ಕಡೆಗಣಿಸಿಲ್ಲ. 224 ಕ್ಷೇತ್ರಗಳಿಗೆ ಸಮಾನ ಆದ್ಯತೆ ನೀಡಿದ್ದೇವೆ. ಯಾವ ಕ್ಷೇತ್ರಗಳಿಗೂ ತಾರತಮ್ಯ ಮಾಡಿಲ್ಲ. ಸದಸ್ಯರ ಈ ಆರೋಪವನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದರು.

Edited By : Nagaraj Tulugeri
PublicNext

PublicNext

03/02/2021 09:50 pm

Cinque Terre

39.21 K

Cinque Terre

1

ಸಂಬಂಧಿತ ಸುದ್ದಿ