ಬೆಂಗಳೂರು : ಅದೇನೋ ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಮಾಡಿದ್ದೇ ಮಾಡಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಾಡೇ ಸಾತಿ ಕಾಡತೊಡಗಿದೆ. ಮಗ್ಗಲು ಮುಳ್ಳಾಗಿರುವ ಬಸವರಾಜ್ ಪಾಟೀಲ್ ಯತ್ನಾಳ ಆಗಾಗ ಬುಡಕ್ಕೆ ಚುಚ್ಚುತ್ತಿದ್ದರೆ ಈಗ ನಿಷ್ಠರ ಗುಂಪೇ ಪಂಚಸೂತ್ರ ಹೆಣೆಯುವ ಮೂಲಕ ಬಿಎಸ್ವೈ ಹಣೆಯುವ ತಂತ್ರ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಸರಕಾರ ಆಡಳಿತ ಹೇಗಿರಬೇಕು ಎಂಬುದನ್ನು ನಿರ್ಧರಿಸಲು 30 ಶಾಸಕರ ತಂಡವೊಂದು ನೀಲ ನಕ್ಷೆ ಸಿದ್ದಪಡಿಸಿದ್ದು ಅದರ ಪ್ರಕಾರ ಆಡಳಿತ ನಡೆದರೆ ಮಾತ್ರ ಸರಕಾರ ಮತ್ತು ಪಕ್ಷಕ್ಕೆ ಹಿತ ಎಂಬ ಸಂದೇಶವನ್ನು ಈ ಶಾಸಕರ ತಂಡಕ್ಕೆ ಹೈಕಮಾಂಡ್ ಗೆ ರವಾನಿಸಲು ರೆಡಿಯಾಗಿದೆ ಎನ್ನಲಾಗುತ್ತಿದೆ.
ಸೂತ್ರ 1: ಸರಕಾರ ಯಡಿಯೂರಪ್ಪ ಅಥವಾ ಪುತ್ರ ವಿಜಯೀಂದ್ರ ಆಗಿರಬಾರದು ಬಿಜೆಪಿ ಸರಕಾರ ಹಾಗೂ ಆಡಳಿತವಾಗಿರಬೇಕು.ಸೂತ್ರ 2: ಬಿಎಸ್ವೈ ಕುಟುಂಬದ ಎಲ್ಲ ಸದಸ್ಯರನ್ನು ಆಡಳಿತದಿಂದ ದೂರವಿಡಬೇಕು. ಸೂತ್ರ 3:ಜಾತಿ ಕೇಂದ್ರಿತ ಸರಕಾರವಾಗದೆ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವಂತಾಗಿರಬೇಕು. ಸೂತ್ರ 4: ಬಿಜೆಪಿ ಪ್ರತಿ ಕಾರ್ಯಕರ್ತನಿಗೂ ಸರಕಾರದ ಸೌಲಭ್ಯ ಅನುಕೂಲ ಸಿಗುವಂತಾಗಬೇಕು. ಸೂತ್ರ 5 : ಸರಕಾರದ ಪರ್ಸಂಟೇಜ್ ಹಾವಳಿ ನಡೆದು ಭ್ರಷ್ಟಾಚಾರ ಮುಕ್ತ ಆಡಳಿತವಾಗಬೇಕು.
ನಮಗೇನೂ ಬೇಡ. ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ಪಕ್ಷಕ್ಕಾಗಿ ದುಡಿದವರಿಗಾಗಿ ಪಂಚಸೂತ್ರ ಜಾರಿಯಾಗಬೇಕಿದೆ ಎಂಬುದು ಈ ತಂಡದ ಆಶಯವಾಗಿದೆ ಅಂತೆ.
ಮಂತ್ರಿ ಸ್ಥಾನ ಸಿಗದ ಅತೃಪ್ತರ ಕಿರಿಕಿರಿ ಒಂದೆಡೆಯಾದರೆ ಈಗ ಈ ನಿಷ್ಠರ ಪಂಚಸೂತ್ರದ ದೂರು ಬಿಎಸ್ವೈ ನಿದ್ದೆಗಡಿಸಿದೆ. ಇದರಿಂದಾಗ ಅವರು ಫುಲ್ ಟೆನ್ಶನ್ ಟೆನ್ಶನ್ ದಲ್ಲಿದ್ದಾರೆ ಎನ್ನಲಾಗುತ್ತಿದೆ.
PublicNext
31/01/2021 09:45 am