ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಯತ್ನಾಳ್ ವಿರುದ್ಧ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಗುಡುಗಿದ್ದು ಹೇಗೆ ಗೊತ್ತಾ...?

ದಾವಣಗೆರೆ: ಸಂಘಟನೆ, ನಾಯಕತ್ವದ ಬಗ್ಗೆ ನಾನು ಮಾತನಾಡುವುದಿಲ್ಲ.‌ ಸಿಎಂ ಯಡಿಯೂರಪ್ಪ ಅವರನ್ನು ಒಬ್ಬ ವ್ಯಕ್ತಿಯಿಂದ ಇಳಿಸಲು ಸಾಧ್ಯ ಇಲ್ಲ‌. ನಾಯಕತ್ವ ಬದಲಾವಣೆ ಇಲ್ಲ ಎಂದು ಈಗಾಗಲೇ ಬಿಜೆಪಿಯ ಕೇಂದ್ರ ವರಿಷ್ಠರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ‌.‌ ಬಾಯಿ ಚಪಲಕ್ಕೋಸ್ಕರ ಏನೋನೋ ಮಾತನಾಡಬಾರದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.‌ಪಿ. ರೇಣುಕಾಚಾರ್ಯ ಹೇಳುವ ಮೂಲಕ ಬಸನಗೌಡ ಪಾಟೀಲ್ ವಿರುದ್ಧ ಹರಿಹಾಯ್ದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಖುರ್ಚಿ ಖಾಲಿ ಇಲ್ಲ.‌ ಯತ್ನಾಳ್ ಹಿರಿಯರು. ಪದೇ ಪದೇ ಅಸಂಬದ್ಧ ಹೇಳಿಕೆ‌ ಕೊಡಬಾರದು. 2023ರ ಚುನಾವಣೆ ವೇಳೆ ಪಕ್ಷದ ವರಿಷ್ಠರು ಯಾರು ಸಿಎಂ ಆಗಬೇಕೆಂಬ ಬಗ್ಗೆ ಘೋಷಣೆ ಮಾಡುತ್ತಾರೆ. ಆಗ ಜನಾದೇಶ ಪಡೆದು ಮುಖ್ಯಮಂತ್ರಿಯಾಗಲಿ ಎಂದು ಯತ್ನಾಳ್ ರಿಗೆ ಸವಾಲು ಹಾಕಿದರು.

ಸಿಎಂ ಬದಲಾವಣೆ ಇಲ್ಲ ಎಂಬುದಾಗಿ ಅಮಿತ್ ಶಾ, ಅರುಣ್ ಸಿಂಗ್ ಹೇಳಿದ್ದಾರೆ. ಸೂರ್ಯ ಚಂದ್ರ ಇರುವಷ್ಟೇ ಯಡಿಯೂರಪ್ಪ‌ ಸಿಎಂ ಆಗಿ ಅವಧಿ ಪೂರ್ಣಗೊಳಿಸುವುದಷ್ಟೇ ಸತ್ಯ. ಯಾರಿಗೆ ಅರ್ಹತೆ, ಹೈಕಮಾಂಡ್ ಒಲವು ಇರುತ್ತೋ ಅವರು ಸಿಎಂ ಆಗ್ತಾರೆ. ಅದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ಮಾತನಾಡಬಾರದು ಎಂದು ಅಭಿಪ್ರಾಯಪಟ್ಟರು.‌

ಮಠಾಧೀಶರ ಬಗ್ಗೆ ಟೀಕೆ ಮಾಡಲು ಹೋಗುವುದಿಲ್ಲ.‌ ಸಮಾಜದ ಹಿತಾಸಕ್ತಿ ಕಾಪಾಡಲು ಶ್ರೀಗಳು ಪಾದಯಾತ್ರೆ, ಹೋರಾಟ ಮಾಡುತ್ತಾರೆ. ಅದೇ ರೀತಿಯಲ್ಲಿ ಪಂಚಮಸಾಲಿ ಸಮಾಜದ ಶ್ರೀಗಳು ಹೋರಾಟ ಮಾಡುತ್ತಿದ್ದಾರೆ‌. ಶ್ರೀಗಳನ್ನು ನಾನು ಸ್ವಾಗತಿಸಿದ್ದೇನೆ. ಅವರ ಬಗ್ಗೆ ಖಂಡನೆ‌ ಮಾಡಲು ಹೋಗುವುದಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

Edited By : Manjunath H D
PublicNext

PublicNext

30/01/2021 10:10 pm

Cinque Terre

62.27 K

Cinque Terre

1

ಸಂಬಂಧಿತ ಸುದ್ದಿ