ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಳು ಹೇಳಿದ ಸರದೇಸಾಯಿ: ಅಸಲಿ ಇಲ್ಲಿದೆ

ನವದೆಹಲಿ: ದೆಹಲಿಯಲ್ಲಿ ನಡೆದ ರೈತ ಪ್ರತಿಭಟನೆ ತೀವ್ರ ಹಿಂಸಾಚಾರ ಸ್ವರೂಪ ಪಡೆದಿದೆ. ಈ ವೇಳೆ ನವನೀತ್ ಎಂವ ರೈತ ಡಿಡಿಯು ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಹಿರಿಯ ಪತ್ರಕರ್ತ ಇದು ಪೊಲೀಸರ ಗುಂಡಿನ ದಾಳಿಯಿಂದ ನಡೆದ ಹತ್ಯೆ ಎಂದಿದ್ದಾರೆ.

ಆದ್ರೆ ಪ್ರಾಥಮಿಕ ಮಾಹಿತಿ ಪ್ರಕಾರ ದೆಹಲಿಯ 45 ವರ್ಷ ವಯಸ್ಸಿನ ನವನೀತ್ ಎಂಬ ರೈತ ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದು ಮೃತಪಟ್ಟಿದ್ದಾನೆ ಎಂಬುದು ಕಂಡು ಬಂದಿದೆ. ಪರೇಡ್ ನಲ್ಲಿ ಭಾಗವಹಿಸಿದ್ದ ನವನೀತ್ ಇರುವ ಟ್ರ್ಯಾಕ್ಟರ್ ನೇರವಾಗಿ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದಿದೆ‌. ಪರಿಣಾಮ ಕೆಳಕ್ಕೆ ಬಿದ್ದ ನವನೀತ್ ಎಂಬ ರೈತ ಮೃತಪಟ್ಟಿದ್ದಾನೆ.

ಆದ್ರೆ ಹಿರಿಯ ಪತ್ರಕರ್ತ ರಾಜ್ ದೀಪ್ ಸರದೇಸಾಯಿ ಅವರ ಟ್ವೀಟ್ ಇದಕ್ಕೆ ವ್ಯತಿರಿಕ್ತವಾಗಿದ್ದು ಆ ಬಗ್ಗೆ ವಿರೋಧ ವ್ಯಕ್ತವಾಗಿದೆ.

Edited By : Nagaraj Tulugeri
PublicNext

PublicNext

26/01/2021 09:59 pm

Cinque Terre

80.66 K

Cinque Terre

12