ಧಾರವಾಡ: ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿ ಧಾರವಾಡದಲ್ಲಿ ನಡೆದ ಟ್ರ್ಯಾಕ್ಟರ್ ಪರೇಡ್ ಗೆ ಕೈ ನಾಯಕರು ಟ್ರ್ಯಾಕ್ಟರ್ ಗಳನ್ನು ಬಾಡಿಗೆ ತಂದಿರುವುದು ಗೊತ್ತಾಗಿದೆ.
ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ನೇತೃತ್ವದಲ್ಲಿ ಧಾರವಾಡದಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಯಿತು. ಈ ಪರೇಡ್ ನಲ್ಲಿ ಸುಮಾರು 200ಕ್ಕೂ ಅಧಿಕ ಟ್ರ್ಯಾಕ್ಟರ್ ಗಳು ಪಾಲ್ಗೊಂಡಿದ್ದವು. ಇವೆಲ್ಲವೂ ಬಾಡಿಗೆ ತಂದಿದ್ದು ಎಂಬುದು ಗೊತ್ತಾಗಿದೆ.
ಇದಕ್ಕೆ ಸ್ಪಷ್ಟ ನಿದರ್ಶನ ಎಂಬಂತೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರೇ ಟ್ರ್ಯಾಕ್ಟರ್ ಬಾಡಿಗೆ ತಂದ ಮಾಲೀಕರಿಗೆ ಬಾಡಿಗೆ ಹಣ ನೀಡಲಾಗಿದೆ.
ಪ್ರತಿ ಟ್ರ್ಯಾಕ್ಟರ್ ಗೆ ಕಾಂಗ್ರೆಸ್ ಮುಖಂಡರು 2 ಸಾವಿರ ರೂಪಾಯಿ ಬಾಡಿಗೆ ನೀಡಲಾಗುವುದು ಎಂದು ಹೇಳಿದ್ರಂತೆ ಆದರೆ ಇಂದು 1500 ರೂಪಾಯಿ ಬಾಡಿಗೆ ನೀಡಿ ಕಳುಹಿಸಿದ್ದಾರೆ.
PublicNext
26/01/2021 08:53 pm