ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೂತನ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಜವಾಬ್ದಾರಿ?- ಇಲ್ಲಿದೆ ಮಾಹಿತಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇದೀಗ ಏಳು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಹತ್ತು ಮಂದಿ ಹಾಲಿ ಸಚಿವರ ಖಾತೆ ಬದಲಾವಣೆಗಳನ್ನೂ ಮಾಡಲಾಗಿದೆ.

ಏಳು ನೂತನ ಸಚಿವರಿಗೆ ಸಿಕ್ಕಿರುವ ಖಾತೆಗಳು:

1) ಉಮೇಶ್ ಕತ್ತಿ - ಆಹಾರ ಮತ್ತು ನಾಗರಿಕ ಪೂರೈಕೆ

2) ಎಸ್ ಅಂಗಾರ - ಮೀನುಗಾರಿಕೆ ಮತ್ತು ಬಂದರು

3) ಎಂಟಿಬಿ ನಾಗರಾಜ್ - ಅಬಕಾರಿ

4) ಮುರುಗೇಶ್ ನಿರಾಣಿ - ಗಣಿಗಾರಿಕೆ

5) ಸಿಪಿ ಯೋಗೇಶ್ವರ್ - ಸಣ್ಣ ನೀರಾವರಿ

6) ಲಿಂಬಾವಳಿ - ಅರಣ್ಯ

7) ಆರ್ ಶಂಕರ್ - ಪೌರಾಡಳಿತ ಮತ್ತು ರೇಷ್ಮೆ

ಹಾಲಿ ಸಚಿವರ ಖಾತೆ ಅದಲುಬದಲು:

ಬಸವರಾಜ ಬೊಮ್ಮಾಯಿ - ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ (ಹೆಚ್ಚುವರಿ)

ಡಾ ಸುಧಾಕರ್ – ಆರೋಗ್ಯ (ವೈದ್ಯಕೀಯ ಶಿಕ್ಷಣ ಖಾತೆ ಹಿಂಪಡೆಯಲಾಗಿದೆ)

ಆನಂದ್ ಸಿಂಗ್ - ಪ್ರವಾಸೋದ್ಯಮ ಮತ್ತು ಪರಿಸರ (ಹಿಂದೆ ಅರಣ್ಯ ಇಲಾಖೆ ಹೊಂದಿದ್ದರು)

ಪ್ರಭು ಚವಾಣ್ - ಪಶು ಸಂಗೋಪಣೆ (ವಕ್ಫ್ ಮತ್ತು ಹಜ್ ಖಾತೆ ಕೈತಪ್ಪಿದೆ)

ಗೋಪಾಲಯ್ಯ - ತೋಟಗಾರಿಕೆ ಮತ್ತು ಸಕ್ಕರೆ (ಆಹಾರ-ನಾಗರಿಕ ಸರಬರಾಜು ಖಾತೆ ಇತ್ತು)

ನಾರಾಯಣಗೌಡ - ಯುವಜನ ಸೇವೆ ಮತ್ತು ಕ್ರೀಡೆ (ಪೌರಾಡಳಿತ, ತೋಟಗಾರಿಕೆ, ರೇಷ್ಮೆ ಖಾತೆ ಹೊಂದಿದ್ದರು)

ಮಾಧುಸ್ವಾಮಿ – ವೈದ್ಯಕೀಯ, ಕನ್ನಡ ಮತ್ತು ಸಂಸ್ಕೃತಿ (ಕಾನೂನು, ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಖಾತೆ ಹೊಂದಿದ್ದರು)

ಸಿಸಿ ಪಾಟೀಲ್ - ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ (ಗಣಿಗಾರಿಕೆ ಖಾತೆ ಕೈತಪ್ಪಿದೆ)

ಕೋಟ ಶ್ರೀನಿವಾಸ ಪೂಜಾರಿ – ಮುಜರಾಯಿ ಮತ್ತು ಹಿಂದುಳಿದ ವರ್ಗ (ಮೀನುಗಾರಿಕೆ ಮತ್ತು ಬಂದರು ಖಾತೆ ಹೊಂದಿದ್ದರು)

Edited By : Vijay Kumar
PublicNext

PublicNext

21/01/2021 05:32 pm

Cinque Terre

61.36 K

Cinque Terre

1

ಸಂಬಂಧಿತ ಸುದ್ದಿ