ಬೆಂಗಳೂರು : ಮೃತರ ಹೆಸರಿನಲ್ಲಿ ಪಿಂಚಣಿ ಹಾಗೂ ಪಡಿತರ ಪಡೆಯುತ್ತಿರುವವರ ವಿವರವನ್ನು ಒಂದು ತಿಂಗಳೊಳಗೆ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದಲ್ಲಿ ಹಲವೆಡೆ ಮೃತರ ಹೆಸರಿನಲ್ಲಿ ಪೆನ್ಷನ್ ಮತ್ತು ಪಡಿತರ ಹೋಗುತ್ತಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೃತ ಪಟ್ಟವರ ಹೆಸರಿನಲ್ಲಿ ವಿವಿಧ ಪಿಂಚಣಿಗಳು ದುರ್ಬಳಕೆ ಆಗುತ್ತಿರುವ ಪ್ರಕರಣಗಳು ಪತ್ತೆಯಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ತಿಂಗಳೊಳಗೆ ಇದನ್ನು ತಡೆಹಿಡಿದು ಸೂಕ್ತ ಕ್ರಮ ವಹಿಸುವಂತೆ ಸಿಎಂ ಬಿಎಸ್ ವೈ ಗಡುವು ನೀಡಿದ್ದಾರೆ.
PublicNext
21/01/2021 11:41 am