ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿಗೆ ಮೂಲ ವಿಷಯಗಳ ತಿಳಿವಳಿಕೆ ಕಮ್ಮಿ: ರಾಹುಲ್​ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂಲ ವಿಷಯಗಳ ಬಗ್ಗೆ ತಿಳಿವಳಿಕೆ ಕಡಿಮೆ ಇದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕದಲ್ಲಿ ಕ್ಯಾಪಿಟಲ್ ಹಿಲ್ ಹಿಂಸಾಚಾರ ಮತ್ತು ರೈತರ ಪ್ರತಿಭಟನೆಯ ಬಗ್ಗೆ ಮೌನವಾಗಿರುವ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಇಸ್​ ಬಾರ್​ ಟ್ರಂಪ್​ ಸರ್ಕಾರ್​​' ಎಂದು ಪ್ರಧಾನಿ ಅಂದು ಹೇಳಿದ್ದನ್ನು ನೆನಪಿಸಿಕೊಳ್ಳಲು ಇಚ್ಛಿಸುತ್ತೇನೆ. ದೇಶದ ಪ್ರಧಾನಿಯಾಗಿದ್ದುಕೊಂಡು ನೀವು ಆ ಹೇಳಿಕೆ ಕೊಡಬಾರದಿತ್ತು. ಆ ಹೇಳಿಕೆ ಅಮೆರಿಕನ್ನರ ಗೌರವಕ್ಕೆ ಚ್ಯುತಿ ತಂದತ್ತಾಗುತ್ತದೆ ಎಂದು ಹೇಳಿದ್ದಾರೆ.

ತಮ್ಮ ದೇಶದ ಅಧ್ಯಕ್ಷನ ಆಯ್ಕೆಯು ಅಮೆರಿಕನ್ನರಿಗೆ ಬಿಟ್ಟ ವಿಚಾರ. ಅದು ಅವರ ಆಯ್ಕೆ, ನಿಮ್ಮದಲ್ಲ. ಈ ರೀತಿಯ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ನಿಮಗೆ ಮೂಲ ವಿಷಯಗಳ ಬಗ್ಗೆ ತಿಳಿವಳಿಕೆ ಕಡಿಮೆ ಇದೆ ಎನ್ನುವುದು ಅರ್ಥವಾಗುತ್ತದೆ. ಅಷ್ಟೇ ಅಲ್ಲದೆ ದೇಶದ ಅನ್ನದಾತರ ಪ್ರತಿಭಟನೆ ಕುರಿತು ಮೌನವಾಗಿ ಇರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

20/01/2021 08:59 am

Cinque Terre

63.28 K

Cinque Terre

16

ಸಂಬಂಧಿತ ಸುದ್ದಿ