ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ. ಕೂಡಲೇ ಅವರೆಲ್ಲರನ್ನೂ ಬಿಡುಗಡೆ ಮಾಡಬೇಕು. ಸೇರಿದಂತೆ ಇನ್ನೂ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ಮುಸ್ಲಿಂ ಸಂಘಟನೆಗಳ ಒಕ್ಕೂಟ ಜ. 22ರಂದು ಬೆಂಗಳೂರು ಬಂದ್ ಗೆ ಕರೆ ಕೊಟ್ಟಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಒಕ್ಕೂಟದ ಸಮನ್ವಯಕಾರ ಮಸೂದ್ ಅಬ್ದುಲ್, ಇದರಲ್ಲಿ ಯಾವುದೇ ಪಕ್ಷ, ಯಾವುದೇ ಗುಂಪು ಇಲ್ಲ. ಸ್ವಯಂ ಪ್ರೇರಿತರಾಗಿ ಬೆಂಗಳೂರಿನಲ್ಲಿರುವ ಮುಸ್ಲಿಮರು ಶುಕ್ರವಾರ ಉದ್ಯಮಗಳನ್ನು ಬಂದ್ ಮಾಡಿ ಸಂಜೆ 5ರವರೆಗೆ ಮನೆಯಲ್ಲಿಯೇ ಇರಬೇಕು ಎಂದು ಮನವಿ ಮಾಡಿದ್ದಾರೆ.
ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಮುಜಮ್ಮಿಲ್ ಪಾಷಾ ಸೇರಿದಂತೆ 421 ಜನರನ್ನು ಅರೆಸ್ಟ್ ಮಾಡಲಾಗಿದೆ. ಕೂಡಲೇ ಅವರನ್ನೆಲ್ಲ ಬಿಡುಗಡೆ ಮಾಡಬೇಕು. ಲವ್ ಜಿಹಾದ್ ಹಾಗೂ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು. ಗೋ ಹತ್ಯೆ ಕಾಯ್ದೆಯನ್ನು ರದ್ದು ಪಡೆಯಬೇಕು ಸೇರಿದಂತೆ ಇನ್ನೂ ಹಾಲವಾರು ಬೇಡಿಕೆಗಳನ್ನು ಕರ್ನಾಟಕ ಮುಸ್ಲಿಂ ಸಂಘಟನೆಗಳ ಒಕ್ಕೂಟ ಸರ್ಕಾರದ ಮುಂದೆ ಇಟ್ಟಿದೆ.
PublicNext
19/01/2021 09:34 am