ಚಿಕ್ಕಮಗಳೂರು: ಸಿದ್ದರಾಮಯ್ಯ ಒಮ್ಮೆ ನಾನು ಹಿಂದು ಅಂತಾರೆ. ಮತ್ತೊಮ್ಮೆ ನನಗೂ ಹಿಂದೂಗೂ ಸಂಬಂಧವಿಲ್ಲ ಎನ್ನುತ್ತಾರೆ. ಒಮ್ಮೆ ನಂದು ಗಾಂಧಿ ಹಿಂದುತ್ವ ಅಂತಾರೆ. ಮಹಾತ್ಮ ಗಾಂಧಿ ದನದ ಮಾಂಸ ತಿನ್ನಿ ಎಂದು ಹೇಳಿದ್ರಾ? ಹೀಗಾಗಿ ಸಿದ್ದರಾಮಯ್ಯ ಅವರದ್ದು ಗಾಂಧಿವಾದ ಅಲ್ಲ. ಅದು ಜಿನ್ನಾವಾದ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕುಟುಕಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಯಾವಾಗ ಆರ್.ಎಸ್.ಎಸ್.ಗೆ ಬಂದರೂ ಗೊತ್ತಿಲ್ಲ. ಆರ್.ಎಸ್.ಎಸ್.ಗೆ ಮುಖಂಡರೂ ಇಲ್ಲ. ಇರೋದು ಸ್ವಯಂ ಸೇವಕರು ಮಾತ್ರ. ಅವರಿಗೆ ಆರ್.ಎಸ್.ಎಸ್. ಅರ್ಥ ಆಗಲ್ಲ. ಇಲ್ಲಿರೋದು ಸ್ವಯಂ ಸೇವಕರು ಮಾತ್ರ. ಇಲ್ಲಿ ಮುಖಂಡರು ಇರಲ್ಲ.
ಇನ್ನು ಸಿದ್ದರಾಮಯ್ಯ ಆರ್.ಎಸ್.ಎಸ್. ಮೂಲ ತಿಳಿಯಬೇಕಂದ್ರೆ ಇಲ್ಲಿಗೆ ಬರಬೇಕು. ಮೊದಲು ಆರ್.ಎಸ್.ಎಸ್.ಗೆ ಬರಲಿ. ಆಮೇಲೆ ಮೂಲ ತಿಳಿಯಲಿ ಎಂದರು. ಅಪ್ಪಟ ದೇಶಭಕ್ತನಿಗೆ ಮಾತ್ರ ಆರ್.ಎಸ್.ಎಸ್. ಮೂಲ ಗೊತ್ತಾಗೋದು. ಜಾತಿವಾದಿ, ವೋಟ್ ಬ್ಯಾಂಕ್ ರಾಜಕಾರಣ ಮಾಡುವವರಿಗೆ ಆರ್.ಎಸ್.ಎಸ್.ಮೂಲ ಗೊತ್ತಾಗಲ್ಲ ಎಂದರು. ಅವರಿಗೆ ದಿನಾ ಒಂದೊಂದು ಕನಸು ಬೀಳುತ್ತೆ. ಬೆಳಗ್ಗೆ ಬಂದು ಅದನ್ನ ಹೇಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
PublicNext
19/01/2021 09:13 am