ಕೊಲ್ಕತ್ತಾ: ಕೊರೋನಾ ಸೋಂಕಿಗಿಂತಲೂ ಭಾರತೀಯ ಜನತಾ ಪಕ್ಷವೇ ಅಪಾಯಕಾರಿ ಎಂದು ಬೆಂಗಾಲಿ ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆಯಾಗಿರುವ ನುಸ್ರತ್ ಜಹಾನ್ ಟೀಕಿಸಿದ್ದಾರೆ.
ಬಹುಸಂಖ್ಯಾತ ಮುಸ್ಲಿಂ ಸಮುದಾಯ ಹೆಚ್ಚಾಗಿರುವ ಬಂಗಾಳದ ದೇಗಂಗಾದಲ್ಲಿ ಮಾತನಾಡಿದ ಸಂಸದೆ ನುಸ್ರತ್ ಜಹಾನ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೊರೋನಾಗಿಂತಲೂ ಹೆಚ್ಚು ಅಪಾಯಕಾರಿ ಯಾವುದು ಗೊತ್ತೆ? ಎಂದು ಪ್ರಶ್ನಿಸಿದ್ದರು. ಅಲ್ಲದೇ, ನಿಮ್ಮ ಸುತ್ತಲೂ ಇರುವ ಕೆಲವು ಜನರು ಕೊರೋನಾಗಿಂತ ಹೆಚ್ಚು ಅಪಾಯಕಾರಿ. ಅವರಿಗೆ ನಮ್ಮ ಸಂಸ್ಕೃತಿ ಅರ್ಥವಾಗುವುದಿಲ್ಲ. ಕಾರಣ, ಅವರಿಗೆ ಮಾನವೀಯತೆ ಗೊತ್ತಿಲ್ಲ. ನಮ್ಮ ಶ್ರಮ ಸಂಸ್ಕೃತಿ ಗೊತ್ತಿಲ್ಲ. ಅವರ ಬಳಿ ಇರುವ ಹಣವನ್ನು ಎಲ್ಲೆಡೆ ಹಂಚುತ್ತಾರೆ. ಧರ್ಮದ ಆಧಾರದ ಮೇಲೆ ಜನರ ನಡುವೆ ಒಡುಕು ಮೂಡಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ನುಸ್ರತ್ ಜಹಾನ್ ಅವರ ಹೇಳಿಕೆಯನ್ನು ಖಂಡಿಸಿದ ಸ್ಥಳೀಯ ಬಿಜೆಪಿ ನಾಯಕ ಅಮಿತ್ ಮಾಳ್ವಿಯಾ, ಈಗ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಮುಸ್ಲಿಂ ಬಹುಸಂಖ್ಯಾತ ದೇಗಂಗಾದಲ್ಲಿ ಬಿಜೆಪಿಯನ್ನು ಕೊರೋನಾಗೆ ಹೋಲಿಸಿ ಟೀಕೆ ಮಾಡುತ್ತಿದ್ದಾರೆ. ಇವೆಲ್ಲವನ್ನು ಕೇಳಿಸಿಕೊಂಡು ಕೂಡ ಮಮತಾ ಬ್ಯಾನರ್ಜಿಮೌನವಾಗಿದ್ದಾರೆ ಯಾಕೆ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
PublicNext
16/01/2021 07:41 am