ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನೀವು ಯಾರನ್ನು ಬೆಂಬಲಿಸುತ್ತೀರಿ?': ಪತ್ರಕರ್ತರ ಮೇಲೆ ನಿತೀಶ್ ಕುಮಾರ್‌ ಗರಂ

ಪಾಟ್ನಾ: ನೀವು ಸೂಕ್ತವಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ. ಅಷ್ಟಕ್ಕೂ ನೀವು ಯಾರನ್ನು ಬೆಂಬಲಿಸುತ್ತಿದ್ದೀರಿ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಪತ್ರಕರ್ತ ಮೇಲೆ ಗರಂ ಆದ ಪ್ರಸಂಗ ಇಂದು ನಡೆಯಿತು.

ಇಂಡಿಗೊ ಏರ್‌ಲೈನ್ ವ್ಯವಸ್ಥಾಪಕ ರೂಪೇಶ್ ಕುಮಾರ್‌ ಸಿಂಗ್ ಹತ್ಯೆಗೆ ಸಂಬಂಧಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ನಿತೀಶ್ ಕುಮಾರ್‌

ತಬ್ಬಿಬ್ಬಾದರು. ''ನೀವು ತುಂಬಾ ಒಳ್ಳೆಯವರು. ನಾನು ನಿಮ್ಮನ್ನು ನೇರವಾಗಿ ಕೇಳುತ್ತಿದ್ದೇನೆ, ನೀವು ಯಾರನ್ನು ಬೆಂಬಲಿಸುತ್ತಿದ್ದೀರಿ? 15 ವರ್ಷಗಳ ಕಾಲ ಆಳಿದ ಪತಿ-ಪತ್ನಿಯ ಆಡಳಿತದಲ್ಲಿ ತುಂಬಾ ಅಪರಾಧಗಳು ನಡೆದಿವೆ. ನೀವು ಅದನ್ನು ಯಾಕೆ ಹೈಲೈಟ್ ಮಾಡಬಾರದು?” ಎಂದು ಪತ್ರಕರ್ತರಿಗೆ 1990ರ ದಶಕದಲ್ಲಿ ಬಿಹಾರದ ಸಿಎಂ ಆಗಿದ್ದ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ರಿ ದೇವಿ ಇಬ್ಬರ ಹೆಸರನ್ನೂ ಉಲ್ಲೇಖಿಸದೆ ಹೇಳಿದರು.

Edited By : Vijay Kumar
PublicNext

PublicNext

15/01/2021 07:38 pm

Cinque Terre

137.58 K

Cinque Terre

3