ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಗೆದ್ದಿದ್ದರೆ ಅದೇ ನನ್ನ ಕೊನೆಯ ಚುನವಣೆ ಆಗುತ್ತಿತ್ತು. ಬಳಿಕ ನಾನು ರಾಜಕೀಯ ನಿವೃತ್ತಿ ಪಡೆಯುತ್ತಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ತುಸು ಹೊತ್ತು ಭಾವುಕರಾಗಿ ಮಾತನಾಡಿದರು.
ಜನ ಆಯ್ಕೆ ಮಾಡ್ತಾರೆ ಎಂಬ ವಿಶ್ವಾಸದೊಂದಿಗೆ ವರುಣಾ ಕ್ಷೇತ್ರ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದು ಸ್ಪರ್ಧೆ ಮಾಡಿದ್ದೆ. ಈ ಕ್ಷೇತ್ರದಿಂದ ಗೆದ್ದಿದ್ದರೆ ಅಧಿಕಾರ ಮುಗಿಸಿ ಮತ್ತೆ ಚುನಾವಣೆಗೆ ನಿಲ್ಲುತ್ತಿರಲಿಲ್ಲ. ಈ ಸೋಲಿನ ನೋವಿನಿಂದ ಇನ್ನೂ ನಾನು ಹೊರ ಬಂದಿಲ್ಲ.
ಚಾಮುಂಡೇಶ್ವರಿ ಕ್ಷೇತ್ರದಿಂದ ನನ್ನ ರಾಜಕೀಯ ಜೀವನ ಆರಂಭಿಸಿದ್ದೆ. ಇಲ್ಲಿಂದಲೇ ರಾಜಕೀಯ ಜೀವನ ಮುಗಿಸಬೇಕೆಂದು ಮತ್ತೆ ಸ್ಪರ್ಧಿಸಿದೆ. ಆದರೆ ಜನ ಕೈ ಹಿಡಿಯಲಿಲ್ಲ. ಇಲ್ಲಿಯವರೆಗೆ ನನಗೆ ಮೈಸೂರಿನಲ್ಲಿ ಮನೆಯೇ ಇರಲಿಲ್ಲ. ಈಗ ಮನೆ ಕಟ್ಟಿಸಲು ಆರಂಭಿಸಿದ್ದೇನೆ. ರಾಜಕೀಯ ಜೀವನ ಮುಗಿದ ಮೇಲೆ ಮೈಸೂರಿನಲ್ಲೇ ಇರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
PublicNext
14/01/2021 01:14 pm