ವಿಜಯಪುರ: ಸಿಎಂ ಯಡಿಯೂರಪ್ಪ ಪುತ್ರನಿಗೆ ಹಣ ನೀಡಿದವರಿಗೆ ಹಾಗೂ ಬ್ಲ್ಯಾಕ್ ಮೇಲ್ ಮಾಡಿದವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಿಡಿ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇಂದು ಸಚಿವರಾದವರ ಪೈಕಿ ಒಬ್ಬರು ಸಿಡಿ ಬ್ಲ್ಯಾಕ್ ಮೇಲ್ ಜೊತೆಗೆ ವಿಜಯೇಂದ್ರನಿಗೆ ಹಣ ಸಂದಾಯ ಮಾಡಿ ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದಾರೆ. ಈ ಹಿಂದೆ ಮೂವರು ಸಚಿವರು ನನ್ನನ್ನು ಭೇಟಿ ಮಾಡಿ ನೀವಾದರೂ ಮುಖ್ಯಮಂತ್ರಿಯಾಗಿ, ನಮಗಾದರೂ ಅವಕಾಶ ನೀಡಿ. ನೂರಾರು ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ತಿಳಿಸಿದ್ದರು. ಅಂದೇ ನಾನು ಆಶ್ಚರ್ಯಪಟ್ಟಿದ್ದೆ ಎಂದು ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ರಕ್ತ ಸಂಬಂಧಿ, ಅವರ ಮೊಮ್ಮಗ ವಿಎಸ್ಟಿ ಎಂದು ಹೇಳುತ್ತಿದ್ದರು. ಆ ಮೂರೂ ಜನರ ಹೆಸರು ಹೇಳುವುದಿಲ್ಲ. ಮಾಧ್ಯಮದವರು ವಿಜಯೇಂದ್ರನ ಪರ ಪ್ರಶ್ನೆ ಮಾಡಬೇಡಿ. ಮೂರೂ ಜನ ಸೇರಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಅವರಲ್ಲಿ ಇಬ್ಬರಿಗೆ ಸಚಿವ ಸ್ಥಾನ, ಓರ್ವರಿಗೆ ಸಿಎಂ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಆದರೆ ನಾನು ಯಾರಿಗೂ ಬ್ಲ್ಯಾಕ್ ಮೇಲ್ ಮಾಡುವುದಿಲ್ಲ ಎಂದು ಯತ್ನಾಳ್ ಕಿಡಿಕಾರಿದ್ದಾರೆ.
PublicNext
13/01/2021 05:15 pm