ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಧಿಕಾ ಯಾರು ಅಂತಾನೇ ನನಗೆ ಗೊತ್ತಿಲ್ಲ ಎಂದ ಕುಮಾರಸ್ವಾಮಿ

ಮಂಡ್ಯ : ತಾವಾಯ್ತು ಸಿನಿಮಾ ಆಯ್ತು ಎಂದುಕೊಂಡು ಹಾಯಾಗಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಅವರು ಇದೀಗ ವಂಚಕ ಯುವರಾಜನ ಪ್ರಕರಣದಲ್ಲಿ ಸಿಸಿಬಿ ವಿಚಾರಣೆಗೆ ಒಳಗಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಧಿಕಾ ಕುಮಾರಸ್ವಾಮಿ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇನ್ನು ಈ ಬಗ್ಗೆ ಮಾಜಿ ಎಚ್‌ಡಿ ಕುಮಾರಸ್ವಾಮಿ ಮೌನ ಮುರಿದಿದ್ದಾರೆ.

ಇಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮಕ್ಕೆ ಕುಮಾರಸ್ವಾಮಿ ಭೇಟಿ ಕೊಟ್ಟರು. ಈ ವೇಳೆ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ವಿಚಾರವಾಗಿ ಮಾಧ್ಯಮದವರು ಎಚ್‌ಡಿಕೆಗೆ ಅಭಿಪ್ರಾಯ ಕೇಳಿದ್ದಾರೆ.

ಇದಕ್ಕೆ ಕುಮಾರಸ್ವಾಮಿ, ಯಾರಪ್ಪ ಅದು.. ಅವರು ಯಾರು ಅಂತ ಗೊತ್ತಿಲ್ಲ. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ? ನನಗೆ ಸಂಬಂಧಪಡದ ವಿಚಾರ ಕೇಳಲೇಬೇಡಿ ಎನ್ನುತ್ತ ಅಲ್ಲಿಂದ ಕಾಲ್ಕಿತ್ತರು.

Edited By : Nagaraj Tulugeri
PublicNext

PublicNext

10/01/2021 04:31 pm

Cinque Terre

90.53 K

Cinque Terre

25