ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದುಡ್ಡು ಕೊಟ್ಟು ಡೀಸೆಲ್ ಹಾಕಿಸದಷ್ಟು ದುರ್ಗತಿ ಬಂದಿಲ್ಲ: ಸಿಡಿಮಿಡಿಗೊಂಡ ಸವದಿ

ಚಿಕ್ಕೋಡಿ: ಬೆಳಗಾವಿ ನಗರದ 3ನೇ ಬಸ್ ಡಿಪೋದ ಬಂಕ್ ನಿಂದ ಸ್ವಂತ ಕಾರಿಗೆ ಡೀಸೆಲ್ ಹಾಕಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸವದಿ ಸಿಡಿಮಿಡಿಗೊಂಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು 3 ಸಾವಿರ ರೂಪಾಯಿ ಕೊಟ್ಟು ನನ್ನ ಕಾರಿಗೆ ಡೀಸೆಲ್ ಹಾಕಿಸಿಕೊಳ್ಳದಂತಹ ದುರ್ಗತಿ ನನಗೆ ಬಂದಿಲ್ಲ.

ಭಗವಂತ ನಮ್ಮ ಮನೆತನವನ್ನ ಉತ್ತಮ ಸ್ಥಿತಿಯಲ್ಲಿಟ್ಟಿದ್ದಾನೆ ಎಂದರು. ಖಾಸಗಿ ಕಾರಿಗೆ ಬಸ್ ಡಿಪೋದಲ್ಲಿನ ಬಂಕ್ ನಿಂದಲೇ ಅವರ ಚಾಲಕ 44 ಲೀಟರ್ ಡೀಸೆಲ್ ಹಾಕಿಸಿಕೊಂಡಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ನನ್ನ ಕಾರಿಗೆ ಆತ ಸಾರಿಗೆ ಬಸ್ ಡಿಪೋದಲ್ಲಿ ಡೀಸೆಲ್ ಹಾಕಿಸಿಕೊಂಡದ್ದು ನಿಜ ಎಂದರು. ಅರಿವಿಲ್ಲದೆ ನಮ್ಮ ಚಾಲಕ ಡೀಸೆಲ್ ಹಾಕಿಸಿಕೊಂಡಿದ್ದಾನೆ. ನಾನು ಕಾರ್ಯಕ್ರಮ ಮುಗಿಸಿ ಹೊರ ಬಂದ ಬಳಿಕ ವಿಚಾರ ಗೊತ್ತಾಯಿತು.

ನಮ್ಮ ಇಲಾಖೆಯ ಡಿಸಿ ಅವರಿಗೂ ಲೋಪದೋಷ ಆಗಿರುವ ಬಗ್ಗೆ ತಿಳಿಸಿದ್ದೇನೆ.

ಖಾಸಗಿ ವಾಹನಗಳಿಗೆ ಡೀಸೆಲ್ ಹಾಕಲು ಬರುವದಿಲ್ಲ ಎಂದು ಬಸ್ ಡಿಪೋದ ಬಂಕ್ ಮ್ಯಾನೇಜರ್ ಕೂಡ ಹೇಳಬಹುದಿತ್ತು.

ಆದರೆ ಈ ಬಗ್ಗೆ ಹೇಳುವ ಅರಿವು ಆ ಮ್ಯಾನೇಜರ್ ಗೂ ಇಲ್ಲ ಎಂದು ಸವದಿ ಹೇಳಿದ್ದಾರೆ.

ನಿಯಮ ಉಲ್ಲಂಘಿಸಿ ಸಚಿವರ ಕಾರಿಗೆ ಡೀಸೆಲ್ ಹಾಕಿದ್ದನ್ನು ಪ್ರಶ್ನಿಸಿ ವಾ.ಕ.ರ.ಸಾ.ಸಂಸ್ಥೆ ಬೆಳಗಾವಿ 3ನೇ ಘಟಕದ ವ್ಯವಸ್ಥಾಪಕರು ಕಿರಿಯ ಸಹಾಯಕ ಬಿ.ಎಸ್. ಕಿಶೋರ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

09/01/2021 01:28 pm

Cinque Terre

72.08 K

Cinque Terre

12