ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಯ್ಯಪ್ಪನ ದರ್ಶನ ಪಡೆದು: ಅನ್ನದಾನಕ್ಕೆ 50 ಸಾವಿರ ರೂ. ದೇಣಿಗೆ ನೀಡಿದ ಜಮೀರ್ ಅಹ್ಮದ್

ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಅವರು ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡಿ, ಸ್ವಾಮಿಯ ದರ್ಶನ ಪಡೆದರು. ಬಳಿಕ ಅನ್ನದಾನಕ್ಕಾಗಿ 50 ಸಾವಿರ ರೂ. ದೇಣಿಗೆ ನೀಡಿದ್ದಾರೆ.

ಮಗಳ ಮದುವೆಯ ಬ್ಯುಸಿಯಲ್ಲಿರುವ ಶಾಸಕರು, ರಾಜಕೀಯ ನಾಯಕರು ಹಾಗೂ ಗಣ್ಯರಿಗೆ ಮದುವೆಯ ಆಮಂತ್ರಣ ನೀಡುವಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ದೇಗುಲಕ್ಕೆ ಭೇಟಿ ನೀಡಿ ಧನಸಹಾಯ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಜಮೀರ್ ಅಹ್ಮದ್, ಚಾಮರಾಜಪೇಟೆ ಕ್ಷೇತ್ರದ 140ನೇ ವಾರ್ಡ್ ನಲ್ಲಿರುವ ಅಯ್ಯಪ್ಪನ ದೇಗುಲಕ್ಕೆ ಭೇಟಿ ನೀಡಿದೆ. ದೇವಸ್ಥಾನದ 45ನೇ ವರ್ಷದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಅನ್ನದಾನಕ್ಕೆಂದು 50 ಸಾವಿರ ರೂ. ನೀಡಿರುವುದಾಗಿ ತಿಳಿಸಿದ್ದಾರೆ.

Edited By : Vijay Kumar
PublicNext

PublicNext

06/01/2021 04:18 pm

Cinque Terre

38.65 K

Cinque Terre

9