ಬೆಂಗಳೂರು: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಲವ್ ಅಂದ್ರೆ ಏನು ಅಂತ ಗೊತ್ತಾ? ಅವರಿಗೆ ಮದುವೆ ಆಗಿದೆಯಾ? ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಪ್ರಶ್ನೆ ಮಾಡಿದ್ದಾರೆ.
ಶಾಸಕರ ಭವನದಲ್ಲಿ ಮಾತನಾಡಿದ ಅವರು ದೇಶ ಮತ್ತು ರಾಜ್ಯಕ್ಕೆ ಏನಾದರೂ ಮಾಡಬೇಕೆಂವ ಉದ್ದೇಶಕ್ಕಾಗಿ ಜೆಡಿಎಸ್ ಪಕ್ಷ ಸೇರಲು ಬಯಸಿದ್ದೇನೆ. ಹೊರತು ಅಲ್ಲಿ ಹೋಗಿ ಮುಸ್ಲಿಂ ಲೀಡರ್ ಆಗಬೇಕೆಂಬ ಉದ್ದೇಶ ಇಲ್ಲ ಎಂದರು.
ರೈತರ ಹಿತ ಮರೆತು ಗೋಹತ್ಯೆ, ಲವ್ ಜಿಹಾದ್ ಜಾರಿ ಮಾಡುವ ಮೂಲಕ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನವನ್ನ ಸರ್ಕಾರ ಮಾಡ್ತಾ ಇದೆ. ದೇಶದ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲೂ ಇದೇ ಸ್ಥಿತಿ ಬಂದರೆ ಅಚ್ಚರಿಪಡಬೇಕಾಗಿಲ್ಲ ಎಂದರು
ನಾನು ಮನಸ್ಸು ಮಾಡಿದ್ರೆ ಯಾವತ್ತೋ ಮುಸ್ಲಿಂ ಲೀಡರ್ ಆಗುತ್ತಿದ್ದೆ ನನಗೆ ಈ ಬಗ್ಗೆ ಯಾವುದೇ ಆಸೆಗಳಿಲ್ಲ. ವಾಸ್ತವವಾಗಿ ನನಗೆ ಹೇಳಲು ಯಾವುದೇ ಭಯವಿಲ್ಲ. ನಾನು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಗೆ ಹೋಗುತ್ತಿದ್ದೇನೆ ಸಿಎಂ ಇಬ್ರಾಹಿಂ ಸ್ಪಷ್ಟವಾಗಿ ಹೇಳಿದ್ದಾರೆ.
PublicNext
06/01/2021 03:24 pm