ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂದೆ ಅನೇಕ ನಾಯಕರು 'ಬಿಬಿಎಂಪಿ ಚಲೋ' ಕೈಗೊಳ್ಳಲಾಗಿದೆ.
ಜನರು ಆರ್ಥಿಕ ಸಂಕಷ್ಟದ ಸಮಯದಲ್ಲಿರುವಾಗ ಬೆಂಗಳೂರು ನಾಗರಿಕರ ಮೇಲೆ ಬಿಬಿಎಂಪಿ ಅನೇಕ ತೆರಿಗೆ ಹೊರೆಯನ್ನು ವಿಧಿಸುತ್ತಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯ ಬಿಜೆಪಿ ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಹೊರಟು ಪ್ರತಿಭಟನಾಕಾರರು ಬಿಬಿಎಂಪಿಗೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಡಿ.ಕೆ.ಶಿವಕುಮಾರ್, ರಾಮಲಿಂಗಾ ರೆಡ್ಡಿ, ಬಿ.ಕೆ.ಹರಿಪ್ರಸಾದ್, ಶಾಸಕ ರಿಜ್ವಾನ್ ಅರ್ಷದ್, ಮಾಜಿ ಮೇಯರ್ ಬಿ.ಎನ್. ಮಂಜುನಾಥ್, ಪದ್ಮಾವತಿ, ರಾಮಚಂದ್ರಪ್ಪ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಹೈದರಾಬಾದ್ ಪಾಲಿಕೆ ಮಾದರಿಯಲ್ಲಿ ಆಸ್ತಿ ತೆರಿಗೆ ವಿನಾಯಿತಿ ನೀಡಬೇಕು. ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿಗೆ ದುಪ್ಪಟ್ಟ ವಸೂಲಿ ಶುಲ್ಕ ವಾಪಸ್ ನೀಡಬೇಕು. ಕಸದ ಮೇಲೆ ವಿಧಿಸಿರುವ ಸಸ್ 200 ರೂ. ರದ್ದುಗೊಳಿಸಬೇಕು. ರಸ್ತೆ ಸಾರಿಗೆಗೆ ವಿಧಿಸಿರುವ ಶೇ.2 ಟ್ಯಾಕ್ಸ್ ರದ್ದು ಮಾಡಬೇಕು. ಮೂರು ಸಾವಿರ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡಬೇಕು. ಇಂದಿರಾ ಕ್ಯಾಂಟಿನ್ ಮುಂದುವರಿಸಬೇಕು. ಸಾರ್ವಜನಿಕರ ಶೌಚಾಲಯ ಸುಸುಜ್ಜಿತವಾಗಿರಬೇಕು. ಕಸ ಮುಕ್ತ, ಪ್ಲಾಸ್ಟಿಕ್ ಮುಕ್ತ ಬೆಂಗಳೂರು ಮಾಡಬೇಕು. ಲಾಕ್‌ಡೌನ್ ವೇಳೆ ನಡೆದ ಅವ್ಯವಹಾರಗಳ ಬಗ್ಗೆ ತನಿಖೆಯಾಗಬೇಕು. ಕೊರೊನಾದಿಂದ ನಿಧನರಾದ ಕುಟುಂಬಗಳಿಗೆ ಪರಿಹಾರ ನೀಡಬೇಕು ಹಾಗೂ ಮಳೆಯಿಂದ ಆಗುತ್ತಿರುವ ಸಮಸ್ಯೆಗಳಿಗೆ ವಿಶೇಷ ಕಾರ್ಯಪಡೆ ಸ್ಥಾಪಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
PublicNext
04/01/2021 01:44 pm