ಬೆಳಗಾವಿ: ರಾಜಕೀಯದಲ್ಲಿ ಒಬ್ಬರನೊಬ್ಬರು ಕಾಲೆಳೆಯುವುದು, ಒಬ್ಬರು ಏಳ್ಗೆಯನ್ನು ಒಬ್ಬರು ಸಹಿಸದೇ ಇರುವುದು ಸಾಮಾನ್ಯ.
ಹಾಗೆಯೇ ಪರಸ್ಪರ ಕಿತ್ತಾಡಿಕೊಳ್ಳುವುದು,ಆರೋಪ ಪ್ರತ್ಯಾರೋಪಗಳು ಸರ್ವೇ ಸಾಮಾನ್ಯ.
ಸದ್ಯ ಕುಂದಾನಗರೀಯಲ್ಲಿಯೂ ರಾಜಕೀಯ ನಾಯಕ ಮತ್ತು ನಾಯಕಿ ಆ ಕ್ಷೇತ್ರ ನನ್ನದು, ಎಂದು ವಾಗ್ವಾದ ಬೆಳೆಸಿದ್ದಾರೆ.
ಹೌದು ‘ಬೆಳಗಾವಿ ಗ್ರಾಮೀಣ ಕ್ಷೇತ್ರ ನನ್ನದು. ನಾನು ತಯಾರು ಮಾಡಿದ್ದದು. ಈಗ ಅಲ್ಲಿ ಯಾರೇ ಗೆದ್ದಿರಬಹುದು.
ಆದರೆ ಅಲ್ಲಿನ ಜನರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ. ಅಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
‘ನಾನು ಗೋಕಾಕ ಕ್ಷೇತ್ರವನ್ನು ಎಂದಿಗೂ ಬಿಡುವುದಿಲ್ಲ. ಗ್ರಾಮೀಣಕ್ಕೆ ಬರುವುದಿಲ್ಲ. ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಬೇಕು ಎನ್ನುವ ಉದ್ದೇಶವಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಗ್ರಾಮೀಣ ಕ್ಷೇತ್ರದಲ್ಲಿ ಒಂದು ಕೆರೆ ನಿರ್ಮಾಣ ಯೋಜನೆ ರದ್ದಾಗಿತ್ತು.
ಅದಕ್ಕೆ ಪರ್ಯಾಯವಾಗಿ ವ್ಯವಸ್ಥೆ ಮಾಡುತ್ತಿದ್ದೇನೆ ಎಂದರು.
‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಖಭಂಗವಾಗಿದೆ’ ಎಂಬ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ.
ಎಲ್ಲ ಅಂಕಿ–ಅಂಶವನ್ನು ಶೀಘ್ರವೇ ಹಾಜರುಪಡಿಸುತ್ತೇನೆ. ದೊಡ್ಡ ಸಮಾರಂಭ ನಡೆಸಿ, ಲೆಕ್ಕ ನೀಡುತ್ತೇನೆ.
ಆ ಶಾಸಕಿ ಹಾಗೂ ಅವರ ಗಾಡ್ ಫಾದರ್ ಪ್ರಚಾರ ಪ್ರಿಯರು. ಆದರೆ, ನಾನು ಹಂಗಲ್ಲ.
ಕೆಲಸ ಮಾಡಿ ತೋರಿಸುತ್ತೇನೆ. ಹತಾಶೆಯಿಂದಾಗಿ ಶಾಸಕರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
‘ಗ್ರಾಮ ಪಂಚಾಯಿತಿ ಚುನಾವಣೆಯು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ದಿಕ್ಸೂಚಿಯಾಗುವುದಿಲ್ಲ. ಎರಡೂ ಬೇರೆ ಬೇರೆ’ ಎಂದರು.
PublicNext
03/01/2021 08:00 am