ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಕೊಡುವ ಕೊರೊನಾ ಲಸಿಕೆ ನಾನೇಕೆ ಚುಚ್ಚಿಸಿಕೊಳ್ಳಲಿ?

ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕೊರೊನಾ ಲಸಿಕೆ ಚುಚ್ಚಿಸಿಕೊಳ್ಳುವುದಿಲ್ಲವಂತೆ, ಏಕೆಂದರೆ ಅದು ಬಿಜೆಪಿ ಸರ್ಕಾರ ನೀಡುತ್ತಿರುವ ಕೊರೊನಾ ಲಸಿಕೆಯಂತೆ. ಅವರಿಗೆ ಮೋದಿ ಮೇಲೆ ನಂಬಿಕೆ ಇಲ್ಲವಂತೆ. ಇಷ್ಟೇ ಅಲ್ಲ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲರಿಗೂ ಉಚಿತ ಲಸಿಕೆ ಕೊಟ್ಟು ನಂತರ ತಾವು ಚುಚ್ಚಿಸಿಕೊಳ್ತಾರಂತೆ.

ಬಿಜೆಪಿ ನೀಡುತ್ತಿರುವ ಕೋವಿಡ್ ಲಸಿಕೆ ನಂಬಲು ಸಾಧ್ಯವಿಲ್ಲ ಹಾಗಾಗಿ, ನಾನು ಆ ಲಸಿಕೆ ಪಡೆಯುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಅಖಿಲೇಶ್ ಯಾದವ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಆಕ್ಸ್‌ಫರ್ಡ್–ಆಸ್ಟ್ರಜೆನಿಕಾ ಸಿದ್ಧಪಡಿಸಿರುವ ಕೋವಿಡ್ ಲಸಿಕೆ ಬಳಸಲು ಔಷಧಿ ನಿಯಂತ್ರಕಕ್ಕೆ ತಜ್ಞರ ಸಮಿತಿ ಹಸಿರು ನಿಶಾನೆ ತೋರಿದ ಬಳಿಕ ದೇಶಾದ್ಯಂತ ಲಸಿಕೆ ತಾಲೀಮು ನಡೆಯುತ್ತಿರುವ ಈ ಸಂದರ್ಭದಲ್ಲಿ ಅಖಿಲೇಶ್ ಈ ಹೇಳಿಕೆ ನೀಡಿದ್ದಾರೆ. ವಿಪಕ್ಷಗಳು ಏನಾದರೂ ಮಾಡಿದಾಗ ಮಾತ್ರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೊರೋನಾ ಲಸಿಕೆ ಬಗ್ಗೆ ಚಿಂತಿಸುತ್ತದೆ ಎಂದಿದ್ಧಾರೆ.

ಕೊರೊನಾ ಹೆಸರಿನಲ್ಲಿ ಜನರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ವಿರೋಧ ಪಕ್ಷಗಳು ಏನಾದರೂ ಮಾಡಿದಾಗ ಮಾತ್ರ ಈ ಸರ್ಕಾರವು ಕೊರೊನಾ ಬಗ್ಗೆ ಕಾಳಜಿ ವಹಿಸುತ್ತದೆ. ಅದೇ ಬಿಜೆಪಿ ಸರ್ಕಾರವು ಚಪ್ಪಾಳೆ ತಟ್ಟಿ ಮತ್ತು ಜಾಗಟೆ ಬಾರಿಸುವ ಮೂಲಕ ಕೊರೊನಾ ತೊಡೆದು ಹಾಕಲು ಬಯಸಿತ್ತು" ಎಂದು ಅವರು ಟೀಕಿಸಿದ್ದಾರೆ.

ಲಸಿಕೆ ಬಗ್ಗೆ ಅಖಿಲೇಶ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ದಾಖಲೆಯ ಸಮಯದಲ್ಲಿ ಲಸಿಕೆ ನೀಡಿದ ವಿಜ್ಞಾನಿಗಳ ಶ್ರಮವನ್ನು ಪ್ರಶ್ನಿಸುವ ಹೇಳಿಕೆ ಕೊಟ್ಟಿದ್ದಕ್ಕೆ ಅಖಿಲೇಶ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

"ಅಖಿಲೇಶ್ ಯಾದವ್ ಲಸಿಕೆ ಮೇಲೆ ನಂಬಿಕೆ ಇಡದಿದಿದ್ದರೆ, ಉತ್ತರ ಪ್ರದೇಶದ ಜನರೂ ಅವರನ್ನು ನಂಬುವುದಿಲ್ಲ. ಅಖಿಲೇಶ್ ತಮ್ಮ ಹೇಳಿಕೆ ಬಗ್ಗೆ ಕೂಡಲೇ ಕ್ಷಮೆಯಾಚಿಸಬೇಕು‘ ಎಂದು ಒತ್ತಾಯಿಸಿದ್ದಾರೆ..

Edited By :
PublicNext

PublicNext

02/01/2021 05:56 pm

Cinque Terre

168.71 K

Cinque Terre

46