ಬೆಂಗಳೂರು: ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನಾನಿರತ ರೈತರನ್ನು 'ತುಕಡೆ ಗ್ಯಾಂಗ್' ಎಂದು ಕರೆದಿದ್ದ ಸಂಸದೆ ಶೋಭಾ ಕರಂದ್ಲಾಜೆ, ಇಂದು ಅವರನ್ನು ಕೃಷಿಕರು ಎನ್ನುವ ಮೂಲಕ ಇಬ್ಬಂದಿತನವನ್ನು ತೋರಿದ್ದಾರೆ.
ಪ್ರತಿಭಟನಾ ನಿರತ ರೈತರು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಪ್ರತಿ ಸುತ್ತಿನಲ್ಲೂ, ಸರ್ಕಾರ ನೀಡುವ ನೀರನ್ನು ಕೂಡ ಮುಟ್ಟದೇ, ತಾವೇ ಒಯ್ದಿದ್ದ ಆಹಾರವನ್ನು ಹಂಚಿಕೊಂಡು ತಿಂದು ಸ್ವಾಭಿಮಾನ ಮೆರೆದಿದ್ದರು. ಇದು 6ನೇ ಸುತ್ತಿನ ಮಾತುಕತೆಯ ವಿರಾಮದ ಸಮಯದಲ್ಲೂ ಮುಂದುವರೆದಿತ್ತು. ಆದರೆ ಈ ಬಾರಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಪಿಯೂಷ್ ಗೋಯಲ್ ರೈತರು ತಂದಿದ್ದ ಊಟ ಮಾಡಿದ್ದರು.
ಕೇಂದ್ರ ಸಚಿವರು ರೈತರೊಂದಿಗೆ ಊಟ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿರುವ ಕರಂದ್ಲಾಜೆ ಅವರು, “ಕೃಷಿಕ ಸಂಘಟನೆಗಳೊಂದಿಗೆ ಮಾತುಕತೆಯ ಸಂದರ್ಭದಲ್ಲಿ ಕೃಷಿಕರೊಂದಿಗೆ ಭೋಜನ ಸೇವಿಸಿದ ಕೇಂದ್ರ ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್” ಎಂದು ಬರೆದುಕೊಂಡಿದ್ದಾರೆ.
PublicNext
31/12/2020 03:32 pm