ಮಂಗಳೂರು: ಸಿಎಂ ಇಬ್ರಾಹಿಂ ಜೆಡಿಎಸ್ ಮರು ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಾಜಿ ಶಾಸಕ YSV ದತ್ತ ಹೇಳಿಕೆ ನೀಡಿದ್ದಾರೆ.
ರಾಜಕೀಯ ಅಂದ್ಮೇಲೆ ಹೊಸ ಪ್ರಯೋಗಗಳು ನಡೆಯುತ್ತಿರುತ್ತವೆ. ಇಬ್ರಾಹಿಂ ಪಕ್ಷಕ್ಕೆ ಬರ್ತಾರೆ ಅನ್ನೋದು ಅಚ್ಚರಿಯಲ್ಲ. ಅರ್ಧ ತೆರೆದ ಬಾಗಿಲು ಅನ್ನೋದು ಅರ್ಧ ಮುಚ್ಚಿದ ಬಾಗಿಲಿನಂತೆ.
ಎಂದು ಇಬ್ರಾಹಿಂ ಸೇರ್ಪಡೆ ವಿಚಾರದ ಬಗ್ಗೆ ದತ್ತ ಮಾರ್ಮಿಕ ನುಡಿದರು. ನಾನು ಪಕ್ಷದ ಆಗು-ಹೋಗು ಬಗ್ಗೆ ವರಿಷ್ಠರಿಗೆ ಮಾತನಾಡಿದ್ದೇನೆ. ಜೆಡಿಎಸ್ ಐಡೆಂಟಿಟಿ ಉಳಿಸಿಕೊಳ್ಳುವುದಾಗಿ ಹೆಚ್ಡಿಕೆ ಹೇಳಿದ್ದಾರೆ.
ಬಿಜೆಪಿ ಜೊತೆ ವಿಲೀನವಿಲ್ಲ ಅನ್ನೋದು ಕೂಡಾ ಸ್ಪಷ್ಟಪಡಿಸಿದ್ದಾರೆ. ಹೊಂದಾಣಿಕೆ, ವಿಲೀನ ಆಗಬಾರದು ಅನ್ನೋ ಅಪೇಕ್ಷೆ ನಮ್ಮದು. ಇನ್ನು ಜೆಡಿಎಸ್, ಕಾಂಗ್ರೆಸ್- ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಳ್ಳಬೇಕಿದೆ.
ಪ್ರಾದೇಶಿಕವಾಗಿ ಜೆಡಿಎಸ್ ಐಡೆಂಟಿಟಿ ಉಳಿಸಿಕೊಳ್ಳಲಿದೆ. ಜೆಡಿಎಸ್ ನಿಂದ ಹರಿದು ಹಂಚಿ ಹೋದವರೇ ಬೇರೆ ಪಕ್ಷದಲ್ಲಿದ್ದಾರೆ. ಅವರೆಲ್ಲರೂ ಕೂತು ಬಿಚ್ಚು ಮನಸ್ಸಿನಿಂದ ಮಾತಾಡಬೇಕಿದೆ.
ಜನತಾ ಪರಿವಾರ ಮತ್ತೆ ಒಂದಾಗಬೇಕಿದೆ. ಪಕ್ಷದ ನಿರ್ಧಾರ ಸ್ಪಷ್ಟವಾಗಿರಬೇಕು ಅನ್ನೋದು ಹೆಚ್ಡಿಕೆಗೆ ನಾವು ಹೇಳಿದ್ದೇವೆ. ಸಭಾಪತಿ, ಕೃಷಿ ವಿಧೇಯಕ ವಿಚಾರದಲ್ಲಿ ಪಕ್ಷದ ಸದಸ್ಯರ ತೀರ್ಮಾನ ತಪ್ಪು.
ವೈಯಕ್ತಿಕವಾಗಿ ನಾನು ಇದನ್ನ ತಪ್ಪು ಎನ್ನುತ್ತೇನೆ. ಮುಂದೆ ಹೀಗೆ ನಡೆಯಬಾರದು ಅನ್ನೋದಾಗಿ ಪಕ್ಷ ತೀರ್ಮಾನಿಸಿದೆ. ಕರ್ನಾಟಕದಲ್ಲಿ ತೃತೀಯ ಅವಕಾಶವಿಲ್ಲದಿದ್ದರೆ
ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಲಿದೆ. ಆದರೆ ಜೆಡಿಎಸ್ ಆ ಮಟ್ಟಿಗೆ ಬೆಳೆಯುತ್ತಿಲ್ಲ ಅನ್ನೋ ಕೊರಗು ಕಾಡುತ್ತಿದೆ ಎಂದರು.
PublicNext
28/12/2020 05:23 pm