ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ತಮ್ಮ 72ನೇ ಹಾಗೂ 2020 ರ ಸಾಲಿನ ಕೊನೆಯ 'ಮನ್ ಕಿ ಬಾತ್'ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಇನ್ನು 4 ದಿನದ ನಂತರ 2021 ನೇ ವರ್ಷ ಆರಂಭವಾಗಲಿದ್ದು, ಪರಸ್ಪರ ಶುಭಾಶಯ ಕೋರುವ ಬದಲು ದೇಶಕ್ಕೆ ಶುಭಾಶಯವನ್ನು ಕೋರೋಂ ಎಂದು ಹೇಳಿದ್ದಾರೆ.
2021 ರಲ್ಲಿ ಭಾರತ ಹೊಸ ಸಾಧನೆಯ ಶಿಖರಕ್ಕೆ ಏರಲಿದೆ. ಕೊರೋನಾ ಹಿನ್ನೆಲೆಯಲ್ಲಿ ದೇಶದಲ್ಲಿ ಹಲವು ಸಮಸ್ಯೆಯಾಗಿದ್ದು, ದೇಶದಲ್ಲಿ ತಯಾರಿಸಲ್ಪಟ್ಟ ಆಟಿಕೆಗಳಿಗೆ ಬೇಡಿಕೆ ಹೆಚ್ಚಿದೆ. ದೇಶದ ಜನರ ಯೋಚನೆಯಲ್ಲಿ ಪರಿವರ್ತನೆಯಾಗಿದೆ. ದೇಶಿಯ ವಸ್ತುಗಳ ಮೇಲೆ ಜನರ ಆಕರ್ಷಣೆ ಹೆಚ್ಚಾಗಿದೆ. ಜೀರೋ ಎಫೆಕ್ಟ್ ಜೀರೋ ಡಿಫೆಕ್ಟ್ ಯೋಚನೆಯಿಂದ ಕೆಲಸ ಮಾಡುವ ಸಮಯ ಇದಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಉತ್ಪಾದಿತ ವಸ್ತುಗಳ ಬಳಕೆಯ ಸಂಕಲ್ಪ ಮಾಡಿರಿ. ದೇಶದಲ್ಲಿ ಸ್ಟಾರ್ಟ್ ಅಪ್ ಗಳು ಮುಂದೆ ಬರಬೇಕು. ದೇಶದಲ್ಲಿ ಚಿರತೆಗಳ ಸಂಖ್ಯೆ ಶೇಕಡ 60 ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಈಗ ಹೊಸ ಸಾಮರ್ಥ್ಯ ಹುಟ್ಟಿಕೊಂಡಿದೆ. ಆ ಹೊಸ ಸಾಮರ್ಥ್ಯದ ಹೆಸರೇ 'ಆತ್ಮ ನಿರ್ಭರತೆ'. ಈ ವರ್ಷ ಕಲಿತ ಪಾಠ ನಿರೀಕ್ಷಿಸಲಾಗದು. ಸಾಧ್ಯವಾಗದ್ದನ್ನು ಕೂಡ ಕಲಿಸಿದ್ದು ಸಂಕಷ್ಟದ ನಡುವೆ ದೇಶದಲ್ಲಿ ಸ್ವದೇಶಿ ಮಂತ್ರ ನಡೆದಿದೆ ಎಂದು ಹೇಳಿದ್ದಾರೆ.
PublicNext
27/12/2020 11:43 am