ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಅವರು ಕಣ್ಣೀರಿಟ್ಟಿದ್ದಾರೆ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಹೌದು ! ಕಳೆದೆರೆಡು ದಿನಗಳಿಂದ ದೆಹಲಿಯಲ್ಲಿರುವ ಯಡಿಯೂರಪ್ಪ ಇಂದು ಬೆಂಗಳೂರಿಗೆ ಮರಳಿಲಿದ್ದಾರೆ. ಆದರೆ ಈ ನಡುವೆ ಶುಕ್ರವಾರ ಮೋದಿಯವರನ್ನ ಸಂಸತ್ತಿನಲ್ಲಿ ಭೇಟಿಯಾದ ಯಡಿಯೂರಪ್ಪ ಭಾವುಕತೆಗೆ ಒಳಗಾಗಿ ಕಣ್ಣಿರು ಹರಸಿದ್ದಾರೆ ಎಂಬ ಸುದ್ದಿ ಲಭ್ಯವಾಗಿದೆ.
ಸಿಎಂ ಭೇಟಿ ಸಂದರ್ಭದಲ್ಲಿ ಮೋದಿ ಬಿಎಸ್ವೈ ಆರೋಗ್ಯದ ಬಗ್ಗೆ ಎಲ್ಲಿಲ್ಲದ ಕಾಳಜಿ ತೋರಿದ್ದು, ರಾಜ್ಯದಲ್ಲಿ ಪ್ರವಾಸ ಕೈಗೊಂಡಿರುವ ಬಗ್ಗೆ ಪ್ರಸಂಶೆ ಮಾಡಿದ್ದು ಜೊತೆಗೆ ಬಿಎಸ್ವೈ ಆರೋಗ್ಯದ ಬಗ್ಗೆ ಕ್ರಮ ವಹಿಸಲು ತಿಳಿಸಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಅತಿ ಹೆಚ್ಚು ಜಾಗರೂಕತೆಯಿಂದ ಇರುವಂತೆ ಮೋದಿ ಹೇಳಿದ್ದು ಈ ಮಾತನ್ನು ಕೇಳಿ ಬಿಎಸ್ವೈ ಆನಂದ ಭಾಷ್ಪ ಹರಿಸಿದ್ದಾರೆ ಎನ್ನಲಾಗಿದ್ದು ಕೊರೊನಾದಿಂದ ಸಾವನ್ನಪ್ಪಿದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ವಿಚಾರ ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿರುವ ಮೋದಿ, ವಿಡಿಯೋ ಕಾನ್ಫರೆನ್ಸ್ ಮೂಲಕವೇ ಸಭೆ ನಡೆಸಲು ಸೂಚಿಸಿದ್ದಾರೆ, ಜೊತೆಗೆ ಕೇಂದ್ರ ಸಚಿವರು ಕೂಡ ಫೋನ್ ಮೂಲಕವೇ ಬೇಡಿಕೆಗಳನ್ನ ತಿಳಿಸಿರಿ ದೆಹಲಿವರೆಗೆ ಪ್ರಯಾಣ ಮಾಡಬೇಡಿ ಎಂದು ಸಲಹೆ ನೀಡಿದ್ದು ಕೇಂದ್ರ ನಾಯಕನ ಮನಸ್ಥಿತಿ ಕಂಡು ಬಿಎಸ್ವೈ ಕಣ್ಣ ಹನಿ ಜಾರಿದೆ.
PublicNext
19/09/2020 09:38 am