ಬೆಂಗಳೂರು: ಉತ್ತರ ಜರ್ಮನಿಯ ಹ್ಯಾಂಬರ್ಗ್ನಲ್ಲಿ ಆಯೋಜಿಸಿರುವ ಭಾರತೀಯ ಕಾನ್ಸಲೇಟ್ ಸಮ್ಮೇಳನಕ್ಕೆ ಸಂಸದ ತೇಜಸ್ವಿ ಸೂರ್ಯ ಅವರನ್ನು ಆಹ್ವಾನಿಸಿದ್ದಕ್ಕೆ ಅನಿವಾಸಿ ಭಾರತೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಗ್ಲೋಮನ್ ಕನ್ಸಲ್ಟಿಂಗ್ ಜಿಎಂಬಿಎಸ್ ಸಹಭಾಗಿತ್ವದಲ್ಲಿ ಅಕ್ಟೋಬರ್ 7ರಂದು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಸಂಸದ, ರಾಷ್ಟ್ರೀಯ ಯುವ ಮೋರ್ಚ ಅಧ್ಯಕ್ಷ ತೇಜಸ್ವಿ ಸೂರ್ಯ ಅವರನ್ನು ಆಹ್ವಾನಿಸಲಾಗಿದೆ. ಇದಕ್ಕೆ ಜರ್ಮನಿಯ ಅನಿವಾಸಿ ಭಾರತೀಯರು ತೇಜಸ್ವಿ ಸೂರ್ಯ ಆಹ್ವಾನಕ್ಕೆ ವಿರೋಧಿಸಿದ್ದಾರೆ.
ಈ ಕುರಿತು ಜರ್ಮನಿಯ ರಾಯಭಾರಿ ಕಚೇರಿಗೆ ಪತ್ರ ಬರೆದಿರುವ ಅನಿವಾಸಿ ಭಾರತೀಯರು, "ತೇಜಸ್ವಿ ಸೂರ್ಯ ಅವರನ್ನು ಸಮ್ಮೇಳನಕ್ಕೆ ಕರೆಸಿಸುತ್ತಿರುವ ಸಂಗತಿ ಬೇಸರ ತರಿಸಿದೆ. ಆರ್ಎಸ್ಎಸ್ನಿಂದ ಚಿರಪರಿಚಿತರಾಗಿರುವ ಅವರು ಅತ್ಯಂತ ಪ್ರಚೋದನಕಾರಿ ಮತ್ತು ಕೋಮುವಾದಿ ರಾಜಕಾರಣಿ. ಅವರ ಆಗಮನಕ್ಕೆ ವಿರೋಧವಿದೆ" ಎಂದು ಕಿಡಿಕಾರಿದ್ದಾರೆ. ಜೊತೆಗೆ ಸಂಸದರು ಕೋಮು ದ್ವೇಷ ಹಾಗೂ ವಿವಾದ ಹುಟ್ಟು ಹಾಕಿದ್ದ ನಾಲ್ಕು ವಿವಾದಾತ್ಮಕ ಟ್ವೀಟ್ ಉಲ್ಲೇಖಿಸಿದ್ದಾರೆ.
PublicNext
05/10/2020 05:30 pm