ಬೆಂಗಳೂರು : ಥಾಮಸ್ ಕಪ್ ಗೆದ್ದ ತಂಡದ ಕನ್ನಡಿಗ ಆಟಗಾರ ಲಕ್ಷ್ಯ ಸೇನ್ ಗೆ ರಾಜ್ಯ ಸರ್ಕಾರ 5 ಲಕ್ಷ ರೂ. ನಗದು ಬಹುಮಾನ ನೀಡಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 5 ಲಕ್ಷದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಡಾ. ನಾರಾಯಣಗೌಡ ಉಪಸ್ಥಿತರಿದ್ದರು.
ಇದೇ ವೇಳೆ ಸೇನ್ ಅವರ ತರಬೇತುದಾರ ವಿಮಲ್ ಕುಮಾರ ಹಾಗೂ ತಂದೆ ಬೀರೇನ್ ಕುಮಾರ ಸೇನ್, ತಾಯಿ ನಿರ್ಮಲಾ ಸೇನ್ ಅವರನ್ನು ಸನ್ಮಾನಿಸಲಾಯಿತು.
PublicNext
17/05/2022 08:52 pm