ಮುಂಬೈ: ಹೈದ್ರಾಬಾದ್ ಸನ್‌ರೈಸರ್ಸ್ ತಂಡದ ವೇಗಿ ಉಮ್ರಾನ್ ಮಲಿಕ್ ಈಗ ಅತಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಭಾನುವಾರ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಭಾರಿ ಪ್ರದರ್ಶನ ನೀಡಿದ್ದಾರೆ. ಇದನ್ನ ಕಂಡ ಕಾಂಗ್ರೆಸ್ ನ ಶಶಿ ತರೂರ್ ಬಹುವಾಗಿಯೇ ಮೆಚ್ಚಿಕೊಂಡಿದ್ದಾರೆ. ತಮ್ಮದೇ ರೀತಿಯಲ್ಲಿಯೇ ಶುಭ ಹಾರೈಕೆ ಕೂಡ ಮಾಡಿದ್ದಾರೆ.
ಕಾಶ್ಮೀರ್ ವೇಗಿ ಉಮ್ರಾನ್ ಮಲಿಕ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದನ್ನ ಕಂಡಿರೋ ಶಶಿ ತರೂರು ಬಹುವಾಗಿಯೇ ಕೊಂಡಾಡಿದ್ದಾರೆ. ಆದಷ್ಟು ಬೇಗ ಉಮ್ರಾನ್ ಮಲಿಕ್ ಭಾರತ ತಂಡದಲ್ಲಿ ಆಡುವಂತಾಗಲಿ ಅಂತಲೂ ಹಾರೈಸಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಮಲ್ಲಿಕ್ 20ನೇ ಓವರ್‌ನಲ್ಲಿ ನಾಲ್ಕು ವಿಕೆಟ್ ಕಿತ್ತಿದ್ದಾರೆ.ಮೇಡನ್ ಓವರ್ ಕೂಡ ಮಾಡಿದ್ದಾರೆ. ಕೇವಲ 28 ರನ್ ನೀಡಿ ಪಂದ್ಯ ಶ್ರೇಷ್ಟ ಕೂಡ ಆಗಿದ್ದಾರೆ.
PublicNext
18/04/2022 11:07 am